As part of Ugadi festival, the festival of Killa Maruti Temple’s Pit Tulukata was celebrated. ಯುಗಾದಿ ಹಬ್ಬದ ಅಂಗವಾಗಿ ಸಂಭ್ರಮದಿ0ದ ಜರುಗಿದ ಕಿಲ್ಲಾ ಮಾರುತಿ ದೇವಸ್ಥಾನದ ಹೊಂಡ ತುಳುಕಾಟ
ಯುಗಾದಿ ಹಬ್ಬದ ಅಂಗವಾಗಿ ಸಂಭ್ರಮದಿ0ದ ಜರುಗಿದ ಕಿಲ್ಲಾ ಮಾರುತಿ ದೇವಸ್ಥಾನದ ಹೊಂಡ ತುಳುಕಾಟ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕಿಲ್ಲಾ ಮಾರುತಿ ದೇವಸ್ಥಾನದ ಆವರಣದ ಮುಂದೆ ಇರುವ ಹೊಂಡ ತುಳುಕಾಟ ಮಂಗಳವಾರದAದು ಸಾಯಂಕಾಲ ೭ ಗಂಟೆಗೆ ಸಡಗರ ಸಂಭ್ರಮದಿAದ ಜರುಗಿತು.
ಪ್ರತಿ ವರ್ಷ ಯುಗಾದಿ ಹಬ್ಬದ ದಿನದಂದು ದೇವಸ್ಥಾನದ ಮುಂದುಗಡೆ ಇರುವ ಹೊಂಡವನ್ನು ಸ್ವಚ್ಛಗೊಳಿಸಿ ಅದರಲ್ಲಿ ನೀರು ತಂಬಿಸಿ ಅದಕ್ಕೆ ಕುಂಕುಮಾರ್ಚನೆ ಮಾಡಿದ ನಂತರ ನಗರದ ಮತ್ತು ಕಿಲ್ಲಾ ಓಣಿಯ ಯುವಕರು ಅದರಲ್ಲಿ ಜಿಗಿದಾಡಿ ಅದನ್ನು ತುಳುಕಿಸುತ್ತಾರೆ.
ದೇವಸ್ಥಾನದ ಮೂಲ ಮಾರುತಿ ಮೂರ್ತಿಗೆ ಬೆಳಿಗ್ಗೆ ಅಭಿಷೇಕ ನಂತರ ಮಹಾಪೂಜೆಯನ್ನು ಮಾಡಿ ತಮ್ಮ ಭಕ್ತಿಯನ್ನು ಅರ್ಪಿಸಿದರು. ಹೊಂಡ ತುಳುಕಾಟದಲ್ಲಿ ಸುಮಾರು ೩೦೦ ಕ್ಕೂ ಹೆಚ್ಚು ಯುವಕರು ಹೊಂಡದಲ್ಲಿ ಜಿಗ್ಗಿದಾಡಿ ಸಂಭ್ರಮಪಟ್ಟರು.