ಮಹಮ್ಮದ್ ಅಜರುದ್ದಿನಗೆ ಸಂಘ ಸಂಸ್ಥೆಯಿAದ ಸತ್ಕಾರ
ಇಳಕಲ್ : ಸೆಂಟ್ರಲ್ ಆರ್ಮಡ್ ಪೋಲಿಸ್ ಫೋರ್ಸಿಸ್ ದ ಅಸಿಸ್ಟೆಂಟ್ ಕಮಾಂಡೆಟ್ ಹುದ್ದೆಗೆ ಆಯ್ಕೆಯಾದ ಮಹಮ್ಮದ್ ಅಜರುದ್ದಿನ ಹಾಲ್ಯಾಳ ಯುವಕನನ್ನು ಇಲ್ಲಿನ ಹಲವಾರು ಸಂಘ ಸಂಸ್ಥೆಗಳು ಮಂಗಳವಾರದAದು ಸತ್ಕರಿಸಿ ಗೌರವಿಸಲಾಯಿತು.
ಇಲ್ಲಿನ ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಿ ಸಿ ಚಂದ್ರಪಟ್ಟಣ ಮತ್ತು ಸದಸ್ಯರು, ಬಣಜಿಗ ಸಮಾಜದ ಅಧ್ಯಕ್ಷ ಗಂಗಾಧರ ಶೆಟ್ಟರ , ಪ್ರಗತಿ ಸಂಘದ ಪ್ರಶಾಂತ ಹಂಚಾಟೆ ಮತ್ತು ಸದಸ್ಯರು ಹಾಗೂ ಪತ್ರಕರ್ತರ ಪರವಾಗಿ ಹಲವಾರು ಸದಸ್ಯರು ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಮಾತನಾಡಿದ ನಿವೃತ್ತ ಉಪನ್ಯಾಸಕ ರಾಮನಗೌಡ ಸಂದಿಮನಿ ಮಹಮ್ಮದ್ ಅಜರುದ್ದಿನ ಕಲಿತ ಮಾಹಿತಿಯನ್ನು ನೀಡಿ ಬಡತನದಲ್ಲಿ ಬೆಳೆದರೂ ಗುರಿ ಸಾಧಿಸಿದ ಬಗೆಯನ್ನು ವಿವರಿಸಿದರು.
ಇಳಕಲ್ ಅರ್ಬನ್ ಬ್ಯಾಂಕ್ ನಿರ್ದೇಶಕ ಲಕ್ಷ್ಮಣ ಅರಸಿದ್ದಿ ಮಾತನಾಡಿ ನ್ಯಾಯಾಂಗ ಶಾಸಕಾಂಗ ಕಾರ್ಯಾಂಗ ವಿಭಾಗದಲ್ಲಿ ಈಗಾಗಲೇ ಹಲವಾರು ಪ್ರತಿಭೆಗಳು ಬೆಳಗಿದ್ದು ಎರಫೋರ್ಸದಲ್ಲಿ ಮಹಮ್ಮದ್ ಅಜರುದ್ದಿನ ಸ್ಥಾನ ಪಡೆದುಕೊಂಡಿದ್ದು ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಿ ಸಿ ಚಂದ್ರಪಟ್ಟಣ ಮಾತನಾಡಿ ಗುರಿ ಸಾಧನೆಗೆ ಗುರುವಿನ ಅಗತ್ಯ ದೊಡ್ಡದು ಎಂದರು. ಜಾಕೀರ ಹುಸೇನ ತಾಳಿಕೋಟಿ ಕಾರ್ಯಕ್ರಮ ನಡೆಸಿಕೊಟ್ಟರು.