At the check post constructed near Gugalamari village of Ilakal taluk: Four kg of dry ganja worth 40 thousand seized ಇಳಕಲ್ ತಾಲೂಕಿನ ಗುಗಲಮರಿ ಗ್ರಾಮದ ಬಳಿ ನಿರ್ಮಿಸಲಾದ ಚೆಕ್ ಪೋಸ್ಟ್ ದಲ್ಲಿ : ೪೦ ಸಾವಿರ ಮೌಲ್ಯದ ನಾಲ್ಕು ಕೆಜಿ ಒಣ ಗಾಂಜಾ ವಶ
ಇಳಕಲ್ ತಾಲೂಕಿನ ಗುಗಲಮರಿ ಗ್ರಾಮದ ಬಳಿ ನಿರ್ಮಿಸಲಾದ ಚೆಕ್ ಪೋಸ್ಟ್ ದಲ್ಲಿ 40 ಸಾವಿರ ಮೌಲ್ಯದ ನಾಲ್ಕು ಕೆಜಿ ಒಣ ಗಾಂಜಾ ಮತ್ತು 30 ಲಕ್ಷ ರೂ ಮೌಲ್ಯದ ಕಂಟೇನರ್ ವಶ
ಖಚಿತ ಮಾಹಿತಿ ಮೇರೆಗೆ ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸರು ನಡೆಸಿದ ದಾಳಿಯಲ್ಲಿ ನಾಲ್ಕು ಕೆಜಿ ಒಣ ಗಾಂಜಾ ಮತ್ತು ಅದನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ವಶಪಡಿಸಿಕೊಂಡ ಘಟನೆ ಬುಧವಾರದ ರಾತ್ರಿ 9-15 ಗಂಟೆಯ ಸುಮಾರಿಗೆ ನಡೆದಿದೆ.
ಡಿಎಸ್ ಪಿ ವಿಶ್ವನಾಥರಾವ್ ಕುಲಕರ್ಣಿ ಸಿಪಿಐ ಸುನೀಲ ಸವದಿ ಪಿಎಸ್ಐ ಎಂ ಎ ಸತ್ತಿಗೌಡರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಇಳಕಲ್ ತಾಲೂಕಿನ ಗುಗಲಮರಿ ಗ್ರಾಮದ ಬಳಿ ನಿರ್ಮಿಸಲಾದ ಚೆಕ್ ಪೋಸ್ಟ್ ದಲ್ಲಿ ನಡೆದ ದಾಳಿಯಲ್ಲಿ ಜಾರ್ಖಂಡ್ ರಾಜ್ಯದ ಲತಾಕಿ ಗ್ರಾಮದ ಮಹಮ್ಮದ್ ಸುಹೇಲ ಶೇಖ ವಯಸ್ಸು 38 ಮತ್ತು ಖರಗದಿಯಾ ಗ್ರಾಮದ ಮಹಮ್ಮದ್ ಕಮರೆ ವಯಸ್ಸು 28 ಇವರನ್ನು ಬಂಧಿಸಿ ೪೦ ಸಾವಿರ ಮೌಲ್ಯದ ಗಾಂಜಾ ಮತ್ತು 30 ಲಕ್ಷ ರೂ ಮೌಲ್ಯದ ಕಂಟೇನರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ಗುರುವಾರದಂದು ಮುಂಜಾನೆ 9 ಗಂಟೆಗೆ ಪೋಲಿಸ್ ಕಚೇರಿಯಿಂದ ಮಾಹಿತಿ ಬಂದಿದೆ.