ಬಾಗಲಕೋಟ\ ಇಳಕಲ್ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಹಿನ್ನೆಲೆ ಬಾಗಲಕೋಟೆಯ ಜಿಲ್ಲೆಯ್ಯಾಂದತ ಆಯಾ ನಗರಸಭೆ,ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಗರ ಹಾಗೂ ಪಟ್ಟಣ ಗ್ರಾಮೀಣ ಭಾಗದಲ್ಲಿನ ಹಾಕಲಾಗಿರುವ ಬ್ಯಾನರ್, ಪ್ಲೆಕ್ಸ್ಗಳನ್ನು ಹಾಗೂ ಕಟ್ಟಡದ ಅಡಿಗಲ್ಲಿನ ಶಿಲಾನ್ಯಾಸವನ್ನು ಹಾಳೆಗಳಿಂದ ಮುಚ್ಚುವ ಕಾರ್ಯವನ್ನು ಶನಿವಾರದಿಂದ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಚುನಾವಣೆ ಆಯೋಗವು ಲೋಕಸಭೆ ಚುನಾವಣೆ ಅಂಗವಾಗಿ ಮಾರ್ಚ್ ೧೬ರಂದು ದೆಹಲಿ ನಗರದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಮತ್ತು ಚುನಾವಣೆ ಪ್ರಕ್ರಿಯೆ ಸಂಪೂರ್ಣ ಮುಗಿಯುವವರೆಗೂ ಈ ನಿಯಮ ಜಾರಿಯಲ್ಲಿ ಇರುತ್ತದೆ.