Badami Police raise awareness ಚೀತಾಗಳ ಮೂಲಕ ಜಾಗೃತಿ ಮೂಡಿಸಿದ ಬಾದಾಮಿ ಪೋಲಿಸರು
ಬಾದಾಮಿಯಲ್ಲಿ ಇಂದು ಎಸ್ ಪಿ. ಅವರ ಆದೇಶದಂತೆ ಪಿ.ಎಸ್.ಐ.ವಿಠಲ್ ನಾಯಿಕ ನೇತೃತ್ವದಲ್ಲಿ೧೦ ಚೀತಾ ಪೆಟ್ರೋಲಿಂಗ ಬೈಕುಗಳು
ಬಾಗಲಕೋಟೆ ಯಿಂದ ಬಾದಾಮಿ ಗೆ ಬಂದಿದ್ದು ಬಾದಾಮಿ ಮತ್ತು ಠಾಣೆ ಸರಹದ್ದಿನ ಹಳ್ಳಿಗಳಲ್ಲಿ ಮುಂಬರುವ ಬಕ್ರಿದ್ ಹಬ್ಬ ಮತ್ತು
ಮುಂಬರುವ ಇನ್ನಿತರ ಹಬ್ಬಗಳ ಬಂದು ಬಸ್ತಿ ನ ಪೂರ್ವಭಾವಿಯಾಗಿ ಪೆಟ್ರೋಲಿಂಗ ಕರ್ತವ್ಯವನ್ನು ನಿರ್ವಹಿಸಲಾಯಿತು.
ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮತ್ತು ಹೆಲ್ಮೆಟ್
ಬಳಕೆ ಅಗತ್ಯತೆ ಕಾರ್ಯಕ್ರಮ ೧೧೨ ತುರ್ತುಸೇವೆ ೧೯೩೦ ಸೈಬರ್ ಅಪರಾಧಗಳ ತುರ್ತು ಸೇವೆ, ಬಾಲ್ಯ ವಿವಾಹ ತಡೆಗಟ್ಟುವಿಕೆ,,
ಪೋಕ್ಸೋ ಕಾಯಿದೆ, ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಇವುಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು
ಎಂದು ಬಾದಾಮಿ ಪಿ. ಎಸ್. ಐ. ವಿಠಲ್ ನಾಯಿಕ ತಿಳಿಸಿದ್ದಾರೆ.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ