Badami PSI Vitthal Naik ಬಾದಾಮಿ ತಾಲೂಕಿನ ಕುರಿಗಾಹಿಗಳ ಕುರಿದಡ್ಡಿಗಳಿಗೆ ಭೇಟಿ ನೀಡಿದ ಬಾದಾಮಿ ಪಿ ಎಸ್ ಐ ವಿಠಲ್ ನಾಯಿಕ್, ಆತ್ಮರಕ್ಷಣೆಗೆ ಬಂದೂಕು ತರಬೇತಿ ಬಗ್ಗೆ ಮಾಹಿತಿ
ಇತ್ತೀಚಿಗಷ್ಟೇ ನಡೆದ ಬಾದಾಮಿ ತಾಲೂಕಿನ ಕುರಿಗಾಹಿಯ ಕೊಲೆ ಘಟನೆ ನಡೆದಿರುವ ಬೆನ್ನಲ್ಲೇ ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಸುತ್ತಮುತ್ತಲಿನ ಕುರಿಗಾಹಿಗಳ ಕುರಿ ದಡ್ಡಿಗಳಿಗೆ ಬಾದಾಮಿ ಪೊಲೀಸ್ ಠಾಣೆಯ ಪಿ ಎಸ್ ಐ. ಸಬ್ ಇನ್ಸ್ಪೆಕ್ಟರ್ ವಿಠಲ್ ನಾಯಿಕ್ ಭೇಟಿ ನೀಡಿ ಕುರಿಗಾಹಿಗಳ ಆತ್ಮರಕ್ಷಣೆ ಮತ್ತು ಅವರ ಸಂರಕ್ಷಣೆ ಸಲುವಾಗಿ ವಿಶೇಷ ಬಂದೂಕು ತರಬೇತಿಯು ಬಾಗಲಕೋಟ ಆಂಖ ಘಟಕದಲ್ಲಿ ಮುಂದಿನ ತಿಂಗಳು ಏಪ್ರೀಲ್ ೭ ರಿಂದ ೧೩ ನೇ ತಾರೀಖಿನ ವರೆಗೆ ಇರುತ್ತದೆ.ಬಂದೂಕು ತರಬೇತಿ ಪ್ರಮಾಣ ಪತ್ರವನ್ನು ಸಹ ನೀಡಲಾಗುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ S P ಅಮರಾನಾಥ ರೆಡ್ಡಿ ತಿಳಿಸಿದ್ದಾರೆ ಎಂದು ಕುರಿಗಾಹಿಗಳಿಗೆ ಬಾದಾಮಿ ಪಿ ಎಸ್ ಐ ವಿಠಲ ನಾಯಿಕ್ ಹೇಳಿದ್ದಾರೆ. ಮತ್ತು ರಾತ್ರಿ ಸಮಯದಲ್ಲಿ ಕುರಿದಡ್ಡಿಗಳ ಕಡೆಗೆ ಜಾಸ್ತಿ ಗಮನ ಹರಿಸಬೇಕು ಏನಾದರು ತೊಂದರೆ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸಬೇಕು ಹಾಗೆಯೇ ತುರ್ತು ಸೇವೆಯ ೧೧೨ ಇಖSS ಬಗ್ಗೆ ತಿಳಿಸಬೇಕು ಪೊಲೀಸ್ ಇಲಾಖೆ ಸೇವೆ ನೀಡಲು ಸಣ್ಣದ್ದವಾಗಿರಿತ್ತದೆ ಎಂದು ತಿಳಿಸಿದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ