ಚಕ್ರವರ್ತಿ ಸೂಲಿಬೆಲೆ ವಾಹನ ತಾಪಸಣೆ ಮಾಡಿದ ಅಧಿಕಾರಿಗಳು
೨೦೨೪ ರ ಲೋಕಸಭಾ ಚುನಾವಣೆಯ ಹಿನ್ನಲೆ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ ಚೆಕ್ ಪೋಸ್ಟ್ ನಲ್ಲಿ ಹಿಂದೂ ಜಾಗರಣಾ ಸಮಿತಿ ನಾಯಕ ಚಕ್ರವರ್ತಿ ಸೂಲಿಬೆಲೆ ಅವರ ವಾಹನವನ್ನು ತಹಸೀಲ್ದಾರ ನಿಂಗಪ್ಪ ಬಿರಾದಾರ ಮತ್ತು ಹುನಗುಂದ ಮತಕ್ಷೇತ್ರದ ಚುನಾವಣೆ ಅಧಿಕಾರಿ ಶಶಿಧರ ಗೋಟೂರ ಮತ್ತು ಗ್ರಾಮೀಣ ಪೋಲಿಸ್ ಠಾಣೆಯ ಸಿಬ್ಬಂದಿ ಮಂಗಳವಾರದ0ದು ತಪಾಸಣೆ ನಡೆಸಿದರು.
ತಾವರಗೇರೆಯಿಂದ ಮುಧೋಳದತ್ತ ಹೊರಟಿದ್ದ ಸೂಲಿಬೆಲೆ ಅವರ ವಾಹನವನ್ನು ತಪಾಸಣೆ ಮಾಡಿದ ನಂತರ ಹೋಗಲು ಅನುಮತಿಯನ್ನು ನೀಡಿದರು. ಚಕ್ರವರ್ತಿ ಸೂಲಿಬೆಲೆ ತಮ್ಮ ವಾಹನವನ್ನು ತಪಾಸಣೆ ಮಾಡುವಾಗ ಅಧಿಕಾರಿಗಳೊಂದಿಗೆ ಸಹಕರಿಸಿದರು.