ಇಳಕಲ್ ನಗರದಲ್ಲಿ ಎಸ್.ಆರ್.ನವಲಿಹಿರೇಮಠ ಸುದ್ದಿಗೋಷ್ಠಿ
ಎಸ್.ಆರ್.ನವಲಿಹಿರೇಮಠರ ನಡೆ ಯಾವ ಕಡೆ ಗೊತ್ತಾ ?
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಎಸ್.ಆರ್.ಎನ್.ಇ ಪೌಂಡೇಶನ್ ಕಾರ್ಯಾಲಯದಲ್ಲಿ ಬುಧವಾರ ಸಾಯಂಕಾಲ ೬ ಗಂಟೆಗೆ ಎಸ್.ಆರ್.ನವಲಿಹಿರೇಮಠ ಅವರಿಂದ ಸುದ್ದಿಗೋಷ್ಠಿ ನಡೆಯಿತು.
೨೦೨೪ ಲೋಕಸಭೆ ಚುನಾವಣೆಯ ಅಂಗವಾಗಿ ಬಾಗಲಕೋಟೆಯ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸವುದಾಗಿ ಅವರು ಮಾತನಾಡಿ ನನ್ನ ಮುಖಂಡರು ಮತ್ತು ಕಾಯ ðಕರ್ತರೊಂದಿಗೆ ಚರ್ಚಿಸಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಅಥವಾ ಸುಮ್ಮನೆ ಇರಬೇಕೋ ಎಂಬುವದನ್ನು ನಾನು ಒಂದು ವಾರದ ಒಳಗೆ ಮತ್ತೊಮ್ಮೆ ಸುದ್ದಿಗೋಷ್ಠಿಯನ್ನು ನಡೆಸಿ ತಿಳಿಸುತ್ತೇನೆ ಎಂದರು. ಈಗಾಗಲೇ ಸಚಿವ ಶಿವಾನಂದ ಪಾಟೀಲ ಅವರು ನನ್ನನ್ನು ಸಂಪರ್ಕ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರನ್ನು ಬೆಂಬಲಿಸುವAತೆ ಅವರು ಕೇಳಿದ್ದಾರೆ.