ಬನಶಂಕರಿ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ ಪತ್ರ!
ಬೆಂಗಳೂರ : ಬನಶಂಕರಿ ದೇವಿಯ ಹುಂಡಿಗೆ ಹಣ ಹಾಕುವ ಬದಲು ಭಕ್ತರು ಚಿತ್ರ-ವಿಚಿತ್ರ ಕೋರಿಕೆಗಳನ್ನ ಪತ್ರ ಬರೆದು ಹಾಕಿದ್ದಾರೆ.
ದೇವಾಲಯದ ಹುಂಡಿಗಳಲ್ಲಿ ಭಕ್ತರ ಪತ್ರಗಳ ಸಾಲೇ ಹರಿದು ಬಂದಿದೆ. ನನ್ನ ಹುಡುಗ ನನ್ನಿಂದ ದೂರ ಆಗಲಿ, ಮಗನ ನಿಶ್ಚಿತಾರ್ಥ ಆಗಿದೆ ಮುರಿದು ಹೋಗದೆ ಇರೋಥರ ಮಾಡಮ್ಮ ಎಂದು ಬಸ್ ಟಿಕೆಟ್‌ಗಳಲ್ಲಿ ಭಕ್ತರು ಚಿತ್ರ-ವಿಚಿತ್ರ ಪತ್ರ ಬರೆದು ಹಾಕಿದ್ದಾರೆ.
ಇಂತ ಚಿತ್ರ-ವಿಚಿತ್ರ ಪತ್ರಗಳು ಸಿಕ್ಕಿದೆ. ಹುಂಡಿ ಎಣಿಸುವಾಗ ಈ ಪತ್ರಗಳನ್ನು ನೋಡಿ ಆಡಳಿತ ಮಂಡಳಿ ಶಾಕ್ ಆಗಿದೆ.