ಕೊಲೆ ಆರೋಪ ಹೊತ್ತಿರುವ ಚಿತ್ರನಟ ದರ್ಶನರನ್ನು ಚಿತ್ರರಂಗದಿಂದ ಸದ್ಯ ಬ್ಯಾನ್ ಮಾಡುವುದಿಲ್ಲ ಎಂದು ಕರ್ನಾಟಕ ಫಿಲ್ಮ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ರನ್ನು ಬಂಧಿಸಲಾಗಿದ್ದು ಕನ್ನಡ ಚಿತ್ರರಂಗದಿAದ, ಅವರನ್ನು ಬಹಿಷ್ಕರಿಸಿ ಎಂಬ ಆಗ್ರಹವು ಜೋರಾಗಿ ಕೇಳಿ ಬರುತ್ತಲಿದೆ.
ಈ ಬೆನ್ನಲ್ಲೇ ಚಿತ್ರರಂಗದಿಂದ ಗುರುವಾರದಂದು ತುರ್ತು ಸಭೆ ನಡೆಸಲಾಯಿತು. ಸದ್ಯ ಚಿತ್ರರಂಗದಿಂದ ಬ್ಯಾನ್ ವಿಚಾರವನ್ನು ಮುಂದೂಡಿದ್ದೇವೆ ಅವರ ಸಿನಿಮಾಗೆ ದುಡ್ಡು ಹಾಕಿದ ನಿರ್ಮಾಪಕರ ಬಗ್ಗೆ ಯೋಚಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.