Hunagunda floods ಪ್ರವಾಹ ಎದುರಿಸಲು ಸನ್ನದ್ದರಾಗಿ : ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ
ಹುನಗುಂದ: ನೆರೆಯ ಮಹಾರಾಷ್ಟರದ ಜಲಾನಯ ಪ್ರದೇಶದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿ ಗೇಟ್‌ದಿಂದ ನೀರು ಹೊರಬಿಡುತ್ತಿರುವದರಿಂದ ಹುನಗುಂದ ತಾಲೂಕಿನ ನದಿ ಪಾತ್ರದ ೩೬ ಗ್ರಾಮಗಳಲ್ಲಿ ನೆರೆ ಭೀತಿ ಬರುವ ಸಾಧ್ಯತೆ ಇದ್ದು ಗ್ರಾಮಗಳಿಗೆ ಭೇಟಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕೈಗೊಂಡು ಪ್ರವಾಹ ಎದುರಿಸಲು ಸನ್ನದ್ದರಾಗಬೇಕು ಎಂದು ತಹಸೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಾಲೂಕಾ ತಹಸೀಲ್ದಾರ ಸಭಾಭವನದಲ್ಲಿ ತಾಲೂಕಿನ ೩೬ ಗ್ರಾಮಗಳಿಗೆ ಪ್ರವಾಹ ಭೀತಿ ಮುಂಜಾಗ್ರತೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಬುಧವಾರ ನಡೆಸಿದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಲವು ದಿನಗಳಿಂದ ಮಹಾರಾಷ್ಟçದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಾಹಿತಿ ಪ್ರಕಾರ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಒಳ ಹರಿವು ಹೆಚ್ಚಾಗುತ್ತಿದೆ. ಹೆಚ್ಚಿನ ನೀರನ್ನು ಬಸವಸಾಗರಕ್ಕೆ ಹರಿಸುತ್ತಿದ್ದು, ಇದರಿಂದ ನದಿ ಪಾತ್ರದ ಸುತ್ತಲಿನ ಜನ-ಜಾನುವಾರುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೆಕು ಎಂದು ಅವರು ತಿಳಿಸಿದರು.ತಾಲೂಕಿನ ಕೂಡಲಸಂಗಮ, ಚವಡಕಮಲದಿನ್ನಿ, ಬಿಸಲದಿನ್ನಿ, ವಳಕಲದಿನ್ನಿ, ತುರಡಗಿ, ಕಟಗೂರ, ವರಗೋಡದಿನ್ನಿ, ಖಜಗಲ್, ಕೆಂಗಲ್‌ಕಡಪಟ್ಟಿ, ಗಂಜಿಹಾಳ, ನಂದನೂರ, ಹಿರೇಮಳಗಾವಿ, ಚಿಕ್ಕಮಳಗಾವಿ, ಚಿಕ್ಕಮಾಗಿ, ಪಾಪಥನಾಳ, ಖೈರವಾಡಗಿ, ಹೂವನೂರ, ಬೆಳಗಲ್, ಮೇದಿನಾಪೂರ, ಬಿಸನಾಳಕೊಪ್ಪ, ಚಿತ್ತರಗಿ, ಗಂಗೂರ, ಧನ್ನೂರ, ಎಮ್ಮೆಟ್ಟಿ, ಅಡಿವಿಹಾಳ, ಇದ್ದಲಗಿ, ಕಮದತ್ತ, ಐಹೊಳೆ, ನಿಂಬಲಗುAದಿ, ರಾಮಥಾಳ, ಮುಳ್ಳೂರ, ಸುರಳಿಕಲ್, ಹಿರೇಮಾಗಿ, ಬೇವಿನಾಳ ಮತ್ತು ಕಮತಗಿ ಗ್ರಾಮಗಳಿಗೆ ಪ್ರವಾಹ ಬರುವ ಭೀತಿ ಇದೆ.
ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯಾ ಗ್ರಾಮಗಳಲ್ಲಿ ಜನ-ಜಾನುವಾರು ಸೇರಿದಂತೆ ಇನ್ನಾವುದೆ ರೀತಿಯಲ್ಲಿ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಈಗಾಗಲೇ ಗುರುತಿಸಿ ಅಲ್ಲಿ ಸುರಕ್ಷಿತ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪ್ರವಾಹ ಬರುವ ಪೂರ್ವದಲ್ಲಿ ಎಲ್ಲವನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ಆಯಾ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲಿ ಈಗಾಗಲೆ ಮಧ್ಯಾಹ್ನ ಊಟದ ಸ್ಥಳದಲ್ಲಿಯೆ ಪ್ರವಾಹಕ್ಕೆ ಒಳಗಾಗುವ ಸಂಸ್ತಸ್ತರಿಗೆ ಊಟ ಮತ್ತು ವೈಧ್ಯಕೀಯ ಹಾಗೂ ಇತರೆ ಸೌಲಭ್ಯಗಳ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ತಹಸೀಲ್ದಾರ ಸೂಚಿಸಿದರು.ಮಳೆ ಮತ್ತು ಪ್ರವಾಹ ಭೀತಿಯ ಮುಂಜಾಗ್ರತೆ ಕುರಿತು ದಿನೆ ದಿನೆ ಮಾಹಿತಿಯನ್ನು ಅಧಿಕಾರಿಗಳು ತಾಲೂಕಾ ಆಡಳಿತಕ್ಕೆ ನೀಡುತ್ತಿರಬೇಕು. ಈಗಾಗಲೆ ನೇಮಿಸಿದ ನೋಡೆಲ್ ಅಧಿಕಾರಿಗಳು ಮೋಬೈಲ್ ಸರ್ವಿಸ್‌ದೊಂದಿಗೆ ನಿದಗದಿಪಡಿಸಿದ ಸ್ಥಳದಲ್ಲೆ ಕಾರ್ಯನಿರ್ವಹಿಸಬೇಕು. ನಿರ್ಧಿಷ್ಟಪಡಿಸಿದ ಕಾಳಜಿ ಕೇಂದ್ರಕ್ಕೆ ಎಲ್ಲವನ್ನು ಈಗಾಗಲೆ ತಯಾರಿ ಮಾಡಿಕೊಳಬೇಕೆಂದು ಅವರು ತಿಳಿಸಿದರು.
ಸಿಪಿಐ ಸುನೀಲ ಸವದಿ, ಸಿಡಿಪಿಒ ವ್ಹಿ.ಎ. ಗಿರಿತಿಮ್ಮಣ್ಣವರ, ಟಿಎಚ್‌ಒ ಸಂಗಮೇಶ ಅಂಗಡಿ, ಸಮಾಜಕಲ್ಯಾಣ ಅಧಿಕಾರಿ ಎಂ.ಎಚ್. ಕಟ್ಟಿಮನಿ, ಲೋಕೋಪಯೋಗಿ ಎಇಇ ವೆಂಕಟೇಶ ಹೂಲಗೇರಿ, ಸಂಗಮೇಶ ಗಡೇದ, ಪಂಚಾಕ್ಷರಯ್ಯ ಪುರಾಣಿಕಮಠ, ಎಸ್.ಡಿ. ಬಬಲಾದಿ, ಎಸ್.ಬಿ.ಗೋನಾಳ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.