Puneeth ಸುರಕ್ಷಾ ಸೇವಾ ಸಂಸ್ಥೆಯಲ್ಲಿ ದಿ.ಪುನೀತ್ ರಾಜಕುಮಾರ ಜನ್ಮದಿನ ಆಚರಣೆ
ಬಾಗಲಕೋಟ ಜಿಲ್ಲೆಯ ಇಳಕಲ್ ಹೊರ ವಲಯದಲ್ಲಿ ಇರುವ ಸುರಕ್ಷಾ ಸೇವಾ ಅಮ್ಮಾ ಸೇವಾಶ್ರಮಯಲ್ಲಿ
ಕನ್ನಡ ಚಿತ್ರರಂಗದ ನಟ ದಿ.ಪುನೀತ್ ರಾಜಕುಮಾರ ಅವರ ೫೦ ನೇ ಜನ್ಮದಿನಚಾರಣೆಯನ್ನು ಸೇವಾಶ್ರಮದಲ್ಲಿ
ಕಲ್ಲಂಗಡಿ ಕತ್ತರಿಸುವ ಮೂಲಕ ಮಾರ್ಚ ೧೭ ಸೋಮವಾರದಂದು ಆಚರಿಸಿದರು.
ಸೇವಾಶ್ರಮದಲ್ಲಿನ ನಿವಾಸಿಗಳಿಗೆ ಅಪ್ಪು ಅಪ್ಪಟ ಅಭಿಮಾನಿ ಸಿದ್ದು ಪಲ್ಲೇದ ಉಪಹಾರ ಮತ್ತು ಸಿಹಿಯನ್ನು ವಿತರಿಸಿದರು.
ಈ ಸಮಯದಲ್ಲಿ ಪುರುಷೋತ್ತಮ ದರಕ, ಸಿಸಿ ಚಂದ್ರಾಪಟ್ಟಣ, ಉದಯ ವದ್ದಿ, ವಿಜಯ ಪಲ್ಲೇದ, ಶರಣಪ್ಪ ಹೊದ್ಲೂರು, ಭೀಮಣ್ಣ ಗಾಣಿಗೇರ ಇದ್ದರು.