ಕೂಡಲಸಂಗಮ ಕಾಲೋನಿಯಲ್ಲಿ ಬಿಜೆಪಿ ಭರ್ಜರಿ ಮತಯಾಚನೆ
ಲೋಕಸಭಾ ಚುನಾವಣೆಯ ಬಾಗಲಕೋಟ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರವಾಗಿ ಹುನಗುಂದ ಮತಕ್ಷೇತ್ರದ ಇಳಕಲ್ ನಗರದ ಕೂಡಲಸಂಗಮ ಕಾಲೋನಿಯಲ್ಲಿ ಬೆಳ್ಳಂ ಬೆಳ್ಳಗೆ ಮನೆ ಮನೆಗೆ ತೆರಳಿ ಬಿಜೆಪಿಗೆ ಮತ ಹಾಕುವಂತೆ ಭರ್ಜರಿ ಮತಯಾಚನೆಯನ್ನು ರವಿವಾರದಂದು ನಡೆಸಿದರು.
ಶ್ರೀಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆಯೊಂದಿಗೆ ಮತಯಾಚನೆಯನ್ನು ಆರಂಭಿಸಿದ ವಾರ್ಡಿನ ಸದಸ್ಯೆ ಹಾಗೂ ನಗರಸಭೆಯ ಮಾಜಿ ಅಧ್ಯಕ್ಷೆ ಶೋಭಾ ಆಮದಿಹಾಳ ನೇತೃತ್ವದಲ್ಲಿ ಪ್ರಚಾರವನ್ನು ಪ್ರಾರಂಭಿಸಿದರು.
ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರು ಮಾತನಾಡಿ ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಗದ್ದಿಗೌಡರಿಗೆ ನಿಮ್ಮ ಮತವನ್ನು ಹಾಕುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದು ಹೇಳಿ ಮತಯಾಚಿಸಿದರು.
ಪ್ರಚಾರದಲ್ಲಿ ಲಕ್ಷö್ಮಣ ಗುರಂ,ಸೂಗುರೇಶ ನಾಗಲೋಟಿ, ಸಂತೋಷ ಐಲಿ, ಮಂಜುನಾಥ ಹೊಸಮನಿ, ಚಂದ್ರಶೇಖರ ಏಕಬೋಟೆ, ಗಣೇಶ ಯರಡೋಣಿ, ಮಹಾಂತೇಶ ಹೊಸಮನಿ, ವೀರೇಶ ಮತ್ತು ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಮೋದಿ ಅಭಿಮಾನಿಗಳು ಪಾಲ್ಗೊಂಡಿದ್ದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
https://www.facebook.com/share/v/RtViohjdjQHPXV2q/?mibextid=oFDknk
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)