businessman ಶೇರು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡುವದಾಗಿ ನಂಬಿಸಿ ಸೈಬರ್ ಕಳ್ಳರಿಂದ 9 ಕೋಟಿ ವಂಚನೆಗೆ ಒಳಗಾದ ಉದ್ಯಮಿ
ನೋಯ್ಡಾದ ರಜತ್ ಬೋಥ್ರಾ ಎಂಬ ಉದ್ಯಮಿ ಷೇರು ಮಾರುಕಟ್ಟೆ ವ್ಯಾಪಾರಕ್ಕೆ ಮಾಹಿತಿ ನೀಡುವ ವಾಟ್ಸಪ್ ಗ್ರೂಪಿಗೆ ಸೇರಿದ ಉದ್ಯಮಿ ನಂತರ ಸೈಬರ್ ಕಳ್ಳರಿಂದ 9 ಕೋಟಿ ರೂ ವಂಚನೆಗೆ ಒಳಗಾಗಿದಾರೆ.
ಬೋಥ್ರಾ ಸಣ್ಣ ಮೊತ್ತದೊಂದಿಗೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಪ್ರಾರಂಭಿಸಿದರು. ಮೇ 27 ರ ಹೊತ್ತಿಗೆ, ಅವರು ಷೇರು ವಹಿವಾಟಿನಲ್ಲಿ 9.09 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದರು.
ಟ್ರೇಡಿಂಗ್ ಖಾತೆಯನ್ನು ಮುಚ್ಚಲಾಗಿದೆ ಮೇ 27 ರ ಹೊತ್ತಿಗೆ ಸಂತ್ರಸ್ತ ಷೇರು ವಹಿವಾಟಿನಲ್ಲಿ 9.09 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್) ವಿವೇಕ್ ರಂಜನ್ ರಾಯ್ ತಿಳಿಸಿದ್ದಾರೆ. “ಆದಾಗ್ಯೂ, ಇದರ ನಂತರ, ಅವರ (ಟ್ರೇಡಿಂಗ್) ಖಾತೆಯನ್ನು ಮುಚ್ಚಲಾಯಿಗಿದೆ” ಎಂದು ಅವರು ಹೇಳಿದಾರೆ.
“ನಮಗೆ ದೂರು ಬಂದಾಗ, ನಾವು ತಕ್ಷಣ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಇಲ್ಲಿಯವರೆಗೆ ನಾವು ಅವರ ಬ್ಯಾಂಕ್ ಖಾತೆಯಲ್ಲಿ 1.62 ಕೋಟಿ ರೂ ಹಿಂಪಡೆವಲ್ಲಿ ಯಶಸ್ವಿಯಾಗಿದ್ದು ಬ್ಯಾಂಕ್ ಖಾತೆಯನ್ನು ಸ್ತಗಿತ್ತ ಗೊಳಿಸಲಾಗಿದೆ .
ವಂಚಿಸಿದ ಹಣವನ್ನು ವಿವಿಧ ಸ್ಥಳಗಳಲ್ಲಿ ವರ್ಗಾಯಿಸದ ಕಳ್ಳರ ಗುಂಪು
ವಂಚಿಸಿದ ಹಣವನ್ನು ಚೆನ್ನೈ, ಅಸ್ಸಾಂ, ಭುವನೇಶ್ವರ, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವರ್ಗಾಯಿಸಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಮತ್ತು ಇದರಲ್ಲಿ ಭಾಗಿಯಾಗಿರುವ ಸೈಬರ್ ಖದೀಮರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಸೈಬರ್ ಕ್ರೈಂ
ಅಪರಿಚಿತರನ್ನು ನಂಬಿ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಮತ್ತು ಯಾವುದೋ ಅಪರಿಚಿತ ಗುಂಪಿನೊಂದಿಗೆ ಹಣ ವರ್ಗಾವಣೆ ಮತ್ತು ನಂಬಿ ಟ್ರೇಡಿಂಗ್ ಮಾಹಿತಿಯನ್ನು ಪಡೆಯಲು ಹೊಸ ವಾಟ್ಸಪ್ ಗ್ರೂಪ್ ಗಳನ್ನು ಸೇರುತ್ತಿರುವ ಜನರಿಗೆ ಈ ಘಟನೆ ಎಚ್ಚರಿಕೆ ಗಂಟೆಯಾಗಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಂ . ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್ ಗಳನ್ನು ಕ್ಲಿಕಿಸದೆ ಜನರು ಜಾಗೃತಿಕತೆಯಿಂದ ಇರಬೇಕೆಂದು ಪೋಲಿಸ್ ಇಲಾಖೆ ಮನವಿ ಮಾಡಿಕೊಂಡಿದೆ.