ದನ ಕರುಗಳ ಮಾಲೀಕರೇ ಈ ಸುದ್ದಿಯನ್ನು ತಪ್ಪದೇ ಓದಿ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಪ್ರಮುಖ ಬೀದಿಗಳಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದ್ದರಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಹೆಚ್ಚಾಗುತ್ತಿದ್ದರಿಂದ.
ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ ರ ಕಲಂ ೨೩೯ ರಡಿ ಮತ್ತು ನಗರಸಭೆಯ ಠರಾವ ಸಂಖ್ಯೆ ೩ ದಿನಾಂಕ:೧೨-೦೯-೨೦೨೩ ರನ್ವಯ ಬೀದಿ ದನಗಳನ್ನು ನಿಯಂತ್ರಿಸುವ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿರುತ್ತದೆ.
ಬೀದಿ ದನಗಳ ಮಾಲೀಕರು ನಗರದ ಬೀದಿಗಳಲ್ಲಿ ತಮ್ಮ ದನ ಕರುಗಳು ಸಂಚರಿಸದAತೆ ನೋಡಿಕೊಳ್ಳುವುದು ಗಡುವಿನ ಅವಧಿ ಮುಗಿದ ನಂತರ ಬೀದಿ ದನಗಳನ್ನು ಬೀದಿಗಳಲ್ಲಿ ಸಂಚರಿಸುವುದು ಕಂಡುಬAದಲ್ಲಿ ಅಂತಹ ಬೀದಿ ದನಗಳನ್ನು ನಗರಸಭೆಯ ವಶಕ್ಕೆ ಪಡೆಯಲಾಗುವದು ಮತ್ತು ಮತ್ತು ಅವುಗಳನ್ನು ಗೋಶಾಲೆಗಳಿಗೆ ಕಳುಹಿಸಿಕೊಡಲಾಗುವುದು ನಂತರದ ಸಂದರ್ಭದಲ್ಲಿ ಬರುವ ಯಾವುದೇ ಆಕ್ಷೇಪಣೆಗಳನ್ನು ನಗರಸಭೆಯು ಹೊಣೆಯಾಗಿರುವದಿಲ್ಲ ಅಂತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಪ್ರಕಟಣೆ ಮೂಲಕ ತಿಳಿಸಿದ್ದಾರೆ.