Canal water entered the farm: the farmer committed suicide in the irrigation office due to the damage to the rice crop. ಜಮೀನಿಗೆ ನುಗ್ಗಿದ ಕಾಲುವೆ ನೀರು : ಭತ್ತದ ಬೆಳೆ ಹಾಳು ನೀರಾವರಿ ಕಚೇರಿಯಲ್ಲಿ ಆತ್ಮಹತ್ಯೆಗೆ ಮುಂದಾದ ರೈತ

WhatsApp Group Join Now
Telegram Group Join Now
Instagram Group Join Now
Spread the love

Canal water entered the farm: the farmer committed suicide in the irrigation office due to the damage to the rice crop. ಜಮೀನಿಗೆ ನುಗ್ಗಿದ ಕಾಲುವೆ ನೀರು : ಭತ್ತದ ಬೆಳೆ ಹಾಳು ನೀರಾವರಿ ಕಚೇರಿಯಲ್ಲಿ ಆತ್ಮಹತ್ಯೆಗೆ ಮುಂದಾದ ರೈತ

ಜಮೀನಿಗೆ ನುಗ್ಗಿದ ಕಾಲುವೆ ನೀರು : ಭತ್ತದ ಬೆಳೆ ಹಾಳು
ನೀರಾವರಿ ಕಚೇರಿಯಲ್ಲಿ ಆತ್ಮಹತ್ಯೆಗೆ ಮುಂದಾದ ರೈತ

ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಶಿವರಾಜ್ ಹೊಳಿಯಾಚೆ ಎಂಬ ರೈತನ ಹೊಲದಲ್ಲಿನ ಭತ್ತದ ಬೆಳೆಗೆ ಕಾಲುವೆ ನೀರು ಜಮೀನಿಗೆ ನುಗ್ಗಿ ಭತ್ತದ ಬೆಳೆ ಹಾಳಾದ ಹಿನ್ನೆಲೆಯಲ್ಲಿ ಕಚೇರಿಗೆ ತೆರಳಿ ಫ್ಯಾನಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಳ್ಳಲು ಮುಂದಾದ ಘಟನೆ ಗುರುವಾರದಂದು ನಡೆದಿದೆ.

ನೀರಾವರಿ ಇಲಾಖೆ ಕಚೇರಿಗೆ ತೆರಳಿ ಅಧಿಕಾರಿಗಳ ಎದುರು ಆತ್ಮಹತ್ಯೆ ಪ್ರಯತ್ನಿಸಿದ್ದಾನೆ. ರೈತನ ಜಮೀನಿನಲ್ಲಿ ಹಾದು ಹೋಗಿರೋ ಶಿಂಗಟಾಲೂರು ಏತ ನೀರಾವರಿ ಕಾಲುವೆ ನೀರು ಓವರ್ ಫ್ಲೋಆಗಿ ಜಮೀನಿಗೆ ನುಗ್ಗಿ ಬೆಳೆಗಳೆಲ್ಲ ಹಾಳುಆಗಿದ್ದರಿಂದ ಬೇಸತ್ತು ನೇರವಾಗಿ ಕಚೇರಿಗೆ ಬಂದು ಆತ್ಮಹತ್ಯೆಗೆ ಮುಂದಾಗಿದ್ದಾನೆ.

ಹಲವು ವರ್ಷಗಳಿಂದ ಬೆಳೆಹಾನಿಗೆ ಪರಿಹಾರ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪರಿಹಾರ ನೀಡದೇ ಸತಾಯಿಸ್ತಿರೋ ಅಧಿಕಾರಿಗಳಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಶಿವರಾಜ್ ಹೊಲ ಸೇರಿದಂತೆ ಹಲವು ರೈತರ ಜಮೀನುಗಳಿಗೆ ಹಾನಿಯಾಗಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ರೈತರು ದಿನವಿಡಿ ಪರದಾಟುತ್ತಿದ್ದಾರೆ.


Spread the love

Leave a Comment

error: Content is protected !!