ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಅಪಘಾತ
ಪ್ರಾಣಾಪಾಯದಿಂದ ಪಾರಾದ ಬಿಜೆಪಿ ಮುಖಂಡ
ಶುಕ್ರವಾರದಂದು ರಾಷ್ಟ್ರೀಯ ಹೆದ್ದಾರಿ ೫೦ ರ ಬೆಳಗಲ್ ಕ್ರಾಸ್ ಹತ್ತಿರದ ಡಾಬಾವೊಂದರ ಬಳಿ ನಡೆದ ಕಾರ ಅಪಘಾತದಲ್ಲಿ ಬಾಗಲಕೋಟ ಜಿಲ್ಲೆಯ ಇಳಕಲ್ ಕೋ ಆಪ್‌ರೇಟಿವ್ ಬ್ಯಾಂಕನ ಅಧ್ಯಕ್ಷ ಹಾಗೂ ಇಳಕಲ್ ನಗರ ಬಿಜೆಪಿ ಘಟಕದ ಅಧ್ಯಕ್ಷ ಅರವಿಂದ ಮಂಗಳೂರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಳಕಲ್ ನಗರದಿಂದ ಕೂಡಲಸಂಗಮದತ್ತ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಬೆಳಗಲ್ ಕ್ರಾಸ್ ಹತ್ತಿರ ಹಿಂದಿನಿಂದ ಬಂದ್ ಲಾರಿವೊಂದು ಡಿಕ್ಕಿ ಹೊಡೆದಿದ್ದರಿಂದ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಎರಡು ಪಲ್ಟಿಯಾಗಿದೆ.
ಕಾರಿನಲ್ಲಿ ಇದ್ದ ಚಾಲಕ ಮತ್ತು ಬ್ಯಾಂಕಿನ ನಿದೇ೯ಶಕ ಬಸವರಾಜ ತಾಳಿಕೋಟಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಕಾರು ಅಪಘಾತದಲ್ಲಿ ನುಜ್ಜು ನುಜ್ಜಾಗಿದೆ.