CAR ACCIEDENT ILKAL ಚಾಲಕ ನಿಯಂತ್ರಣ ತಪ್ಪಿ : ಚರಂಡಿ ಕದ್ದಕಕ್ಕೆ ಬಿದ್ದ ಕಾರು : ಚಾಲಕನಿಗೆ ಗಾಯ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕಂಠಿ ಸರ್ಕಲ್‌ದಿಂದ ಗೊರಬಾಳ ನಾಕಾ ಹೋಗುವ ರಸ್ತೆಯಲ್ಲಿ ಬರುವ ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಚರಂಡಿ ಕದ್ದಕಕ್ಕೆ ಬಿದ್ದ ಘಟನೆ ರವಿವಾರ ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ನಡೆದಿದೆ.
ಚಾಲಕನ ಕೈಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳೀಯ ಜನರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಸ್ತೆಯ ಪಕ್ಕ ಇರುವ ಡಂಬ್ಬಿನಗಳ ಮೇಲೆ ಹಾಯ್ದು ಚರಂಡಿ ಕಂದಕಕ್ಕೆ ಬಿದಿದ್ದರಿಂದ ಗಾಡಿಯಲ್ಲಿನ ಎರಡು ಏರ್ ಬ್ಯಾಗ ಓಪನ್‌ಆಗಿವೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದಾರೆ.