Car blocked: 5 lakhs robbery. ಕಾರು ಅಡ್ಡಗಟ್ಟಿ : ೫ ಲಕ್ಷರೂ ದರೋಡೆ.!

WhatsApp Group Join Now
Telegram Group Join Now
Instagram Group Join Now
Spread the love

ಕಾರು ಅಡ್ಡಗಟ್ಟಿ : ೫ ಲಕ್ಷರೂ ದರೋಡೆ.!

ಕೊಪ್ಪಳ : ತಾವರಗೇರಾಪಟ್ಟಣದ ಸಮೀಪದ ಕಿಲ್ಲಾರಹಟ್ಟಿ ಹತ್ತಿರ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಕಾರ್ ವೊಂದನ್ನು ಅಡ್ಡಗಟ್ಟಿ ದುಷ್ಕರ್ಮಿಗಳು ೫ ಲಕ್ಷ ರೂ ದರೋಡೆ ಮಾಡಿದ ಘಟನೆ ಜರುಗಿದೆ.

ಲಿಂಗಸಗೂರ ಪಟ್ಟಣದಿಂದ ಕೊಪ್ಪಳಕ್ಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಜಯ ಮಹಾಂತೇಶ ಪಲ್ಲೇದ ಹಾಗೂ ಶಿವಾನಂದ ಐದನಾಳ, ಖಾಲೀದ್ ಅಹ್ಮದ್ ಅವರು ೫ ಲಕ್ಷ ರೂ ಗಳನ್ನು ತೆಗೆದುಕೊಂಡು ಕಾರ್ ನಲ್ಲಿ ಕೊಪ್ಪಳಕ್ಕೆ ತೆರಳುತ್ತಿದ್ದಾಗ ,

ಕಿಲ್ಲಾರಹಟ್ಟಿ ಡಗ್ಗಿ ಹತ್ತಿರದ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ೫ ಜನ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ , ಬ್ಲೇಡಿ ನಿಂದ ಗಾಯಗೊಳಿಸಿ ೫ ಲಕ್ಷರೂ ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ ಪಿ ಯಶೋಧಾ ವಂಟಗೋಡಿ , ಪಿಎಸ್ ಐ ನಾಗರಾಜ ಕೊಟಗಿ, ಮಲ್ಲಪ್ಪ ವಜ್ರದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

 

 


Spread the love

Leave a Comment

error: Content is protected !!