ಚಂಡಮಾರುತ ಮತ್ತು ಮಳೆಯಿಂದಾಗಿ ಸೀಲಿಂಗ್ ಕುಸಿತ ಗುವಾಹಟಿ ವಿಮಾನ ನಿಲ್ದಾಣ ಅಸ್ತವ್ಯಸ್ತ.
ಪ್ರಬಲ ಚಂಡಮಾರುತ ಮತ್ತು ಭಾರೀ ಮಳೆಯ ನಡುವೆ, ಜನಪ್ರಿಯ ಗೋಪಿನಾಥ್ ಬೋರ್ಡೋಲೋಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿಯ ಒಂದು ಭಾಗವು ಭಾನುವಾರ ಗುವಾಹಟಿಯಲ್ಲಿ ಕುಸಿದಿದೆ. ಅನೇಕ ಭಾಗಗಳಲ್ಲಿ ಸೀಲಿಂಗ್ ಇದ್ದಕ್ಕಿದ್ದಂತೆ ಕುಸಿದುಬಿದ್ದ ಕಾರಣ, ನೀರು ಒಳಗೆ ಹರಿಯಲು ಪ್ರಾರಂಭಿಸಿ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆಗೆ ಕಾರಣವಾಯಿತು. ಕಠಿಣ ಹವಾಮಾನದಿಂದಾಗಿ ಎಲ್ಜಿಬಿಐ ವಿಮಾನ ನಿಲ್ದಾಣವು ಈಗಾಗಲೇ ವಿಮಾನ ಸಂಚಾರ ಸ್ಥಗಿತಗೊಳಿಸಿತ್ತು. ಆದರೆ, ಅಪಘಾತದಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ.
ತೀವ್ರ ಚಂಡಮಾರುತದಿಂದಾಗಿ, ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತು ಮತ್ತು ಆರು ವಿಮಾನಗಳನ್ನು ಇತರ ಸ್ಥಳಗಳಿಗೆ ತಿರುಗಿಸಿತು. “ಚಂಡಮಾರುತವು ಅದಾನಿ ಗ್ರೂಪ್ ನಿಯಂತ್ರಿತ ಸೌಲಭ್ಯದ ಹೊರಗಿನ ಇಂಡಿಯಾ ಆಯಿಲ್ ಸಂಕೀರ್ಣದಲ್ಲಿ ದೊಡ್ಡ ಮರ ಉರುಳಿದ್ದು ರಸ್ತೆಯ ಸಂಚಾರಕ್ಕೆ ಅಡಚಣೆ ಉಂಟು ಮಾಡಿತು” ಎಂದು ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ (ಸಿಎಒ) ಉತ್ಪಲ್ ಬರುವಾ ಪಿಟಿಐಗೆ ತಿಳಿಸಿದ್ದಾರೆ.
ತೀವ್ರ ಚಂಡಮಾರುತದಿಂದಾಗಿ ವಿಮಾನ ನಿಲ್ದಾಣದ ಆವರಣದೊಳಗೆ ಮಳೆನೀರು ನುಗಿದ್ದು ಹಲವಾರು ವೀಡಿಯೊಗಳನ್ನು ವಿಮಾನ ನಿಲ್ದಾಣದೊಳಗೆ ಇದ್ದ ಪ್ರಯಾಣಿಕರು ರೆಕಾರ್ಡ್ ಮಾಡಿದ್ದಾರೆ, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂತಹ ಒಂದು ವೀಡಿಯೊದಲ್ಲಿ ಕಾರ್ಮಿಕರು ಅಸಹಾಯಕತೆಯಿಂದ ಮಹಡಿಗಳ ಒಳಗೆ ನುಗಿದ್ದು ಮಳೆನೀರನ್ನು ಗುಡಿಸಲು ಪ್ರಯತ್ನಿಸುತ್ತಿದ್ದಾಗ ವಿಮಾನ ನಿಲ್ದಾಣದ ಒಳಗಿನ ಸೀಲಿಂಗ್ನಿಂದ ನೀರು ಸುರಿಯುತ್ತಿದೆ . ನೀರು ಸಂಗ್ರಹಿಸಲು ಚಾವಣಿಯ ಕೆಳಗೆ ಇರಿಸಲಾಗಿರುವ ಕಂಟೈನರ್ಗಳು ಸಹ ವೀಡಿಯೊಕ್ಲಿಪ್ ತೋರಿಸುತ್ತದೆ.