ಸಸಿ ನೆಡುವ ಮೂಲಕ ಪಂಡಿತ ದೀನದಯಾಳ ಜಯಂತಿ ಆಚರಣೆ
ಬಾಗಲಕೋಟೆ : ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾ ಗ್ರಾಮೀಣ ಮಂಡಲದ
ಬೇವೂರಿನ ಗ್ರಾಮದಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರ ಜಯಂತಿಯನ್ನು ಆಚರಿಸಲಾಯಿತು.
ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿಮಠ ದೀನದಯಾಳ
ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಸಿಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಜಯಂತಿಯನ್ನು ಆಚರಣೆ ಮಾಡಿದರು.
ಈ ಸಮಯದಲ್ಲಿ ರಾಜ್ಯ ರೈತ ಮೋಚಾ ಕಾರ್ಯದರ್ಶಿ ಶಶಿಕುಮಾರ ಗುಟ್ಟನವರ್, ಬಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಗಡ್ಡಿಯಣ್ಣನವರ,
ಗ್ರಾಮೀಣ ರೈತ ಮೋರ್ಚಾ ಅಧ್ಯಕ್ಷ ರಾಜು ಮೇಟಿ, ರಾಜು ಮುದೇನೂರ, ನಿಂಗಪ್ಪ ಮಾಗನೂರ, ಪರಪ್ಪ ಗುನ್ನಿ,
ಶಿವು ಮಾಡ್ಕರ್, ಸಂಗಣ್ಣ ರಾಮದಂಡ ಸೇರಿದಂತೆ ಗ್ರಾಮದ ಗುರು ಹಿರಿಯರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.