ಇಳಕಲ್‌ದ ಬಿಜೆಪಿ ಕಾರ್ಯಾಲಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಜಯಂತಿ ಆಚರಣೆ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಬಿಜೆಪಿ ಕಾರ್ಯಾಲಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರವಿವಾರದಂದು ಮುಂಜಾನೆ ೧೦ ಗಂಟೆಗೆ ಆಚರಿಸಲಾಯಿತು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚಿಸಿದ ಸಂವಿಧಾನದ ಕುರಿತು ಹಲವಾರು ವಿಚಾರಗಳನ್ನು ಹಂಚಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾಂತಪ್ಪ ಚನ್ನಿ, ನಗರಸಭೆ ಮಾಜಿ ಅಧ್ಯಕ್ಷೆ ಶೋಭಾ ಆಮದಿಹಾಳ,ಮಂಜುನಾಥ ಶೆಟ್ಟರ್,ಶ್ಯಾಮಜಿ ಕರವಾ, ಮಂಜುನಾಥ ಹೊಸಮನಿ,ಆನಂದ ಚಲವಾದಿ,ಎಮ್ ಆರ್ ಪಾಟೀಲ,ರಾಘವೇಂದ್ರ ಸೂರೆ,ರಾಜೇಂದ್ರ ಆರಿ,ಗಣೇಶ ಯರಡೋಣಿ, ಹನುಮಂತ ತುಂಬದ, ಶಿವುಕುಮಾರ ಹಾವರಗಿ,ಮಹಾಂತೇಶ ಬಂಡಿ,ಮಲ್ಲಿಕಾರ್ಜುನ ಕುಂಬಾರ, ವಿರೇಶ ಮನ್ನಾಪೂರ, ರವಿ ಕೊಪ್ಪಳ, ಶಂಕರ ಗಾಣದಾಳ, ಬಸವರಾಜ ಹುನಕುಂಟಿ, ನಗರಸಭೆ ಸದಸ್ಯ ಸೂಗುರೇಶ ನಾಗಲೋಟಿ ಹಾಗೂ ಕಪೀಲ್ ಪವಾರ ಇದ್ದರು.