Celebration of Jagadgura Renukacharya and Hanagalla Kumareshwar Jayanti on April 9 in Hunagunda Townಹುನಗುಂದ ಪಟ್ಟಣದಲ್ಲಿ ಎಪ್ರಿಲ್ ೯ ರಂದು ಜಗದ್ಗುರ ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತಿ ಆಚರಣೆ
ಹುನಗುಂದ ಪಟ್ಟಣದಲ್ಲಿ ಎಪ್ರಿಲ್ ೯ ರಂದು ಜಗದ್ಗುರ ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತಿ ಆಚರಣೆ
ಜಗದ್ಗುರ ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತಿಯನ್ನು ಏ.೯ ರಂದು ಬೆಳಿಗ್ಗೆ ೯ ಗಂಟೆಗೆ ಗಚ್ಚಿನಮಠದಲ್ಲಿ ಆಚರಿಸಲಾಗುವುದು. ಪಟ್ಟಣದ ಎಲ್ಲಜನರು ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.
ಹುನಗುಂದ ಪಟ್ಟಣದ ಗಚ್ಚಿನಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಹಾನಗಲ್ಲ ಕುಮಾರೇಶ್ವರ ಜಯಂತಿಯನ್ನು ಆಚರಿಸುವ ಕುರಿತು ಭಾನುವಾರ ಸಂಜೆ ಕರೆದ ಪೂರ್ವಭಾವಿ ಮತ್ತು ಭಾವೈಕ್ಯೆತೆಯ ಸಭೆಯಲ್ಲಿ ಮಾತನಾಡಿದ ಸಮಾಜಕ್ಕೆ ತಮ್ಮದೆಯಾದ ಅಪಾರವಾದ ಕೊಡುಗೆಯನ್ನು ನೀಡಿದ ಜಗದ್ಗುರ ರೇಣುಕಾಚಾರ್ಯ ಮತ್ತು ಹಾನಗಲ್ಲ ಕುಮಾರೇಶ್ವರ ಅವರಾಗಿದ್ದು ಅಂತಹ ಶರಣರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು.
ಗಚ್ಚಿನಮಠವು ಒಂದು ಭಾವೈಕ್ಯೆತೆಯ ಮಠವಾಗಿದ್ದು ಆದ್ದರಿಂದ ಎಲ್ಲ ಸಮಾಜದ ಹಿರಿಯರು ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು ಎಂದು ತಿಳಿಸಿದರು.
ವೇದಮೂರ್ತಿ ಮಹಾಂತಯ್ಯ ಗಚ್ಚಿನಮಠ ಮಾತನಾಡಿದರು.ವೀರಭದ್ರಯ್ಯ ಗಣಾಚಾರಿ, ಚನ್ನಬಸಯ್ಯ ಹಿರೋಳ್ಳಿಮಠ, ಜಿ.ಬಿ.ಕಂಬಾಳಿಮಠ, ಬಸವರಾಜ ಕಂಬಾಳಿಮಠ, ಬಸವರಾಜ ಗೊಣ್ಣಾಗರ, ರವಿ ತಾವರಗೇರ, ಅರುಣೋದಯ ದುದ್ಗಿ, ಗಿರಿಮಲ್ಲಪ್ಪ ಹಳಪೇಟಿ ಸೇರಿದಂತೆ ಇತರರು ಇದ್ದರು.