ಇಳಕಲ್ಲದ ಬಿಜೆಪಿ ಕಾರ್ಯಾಲಯದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಆಚರಣೆ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಬಿಜೆಪಿ ಕಾರ್ಯಾಲಯದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವವನ್ನು ಶನಿವಾರ ಮುಂಜಾನೆ ೧೦ ಗಂಟೆಗೆ ಆಚರಿಸಲಾಯಿತು.
ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ದೇವರ ದಾಸಿಮಯ್ಯ ನೇಕಾರಿಕೆ ಕಾಯಕವನ್ನು ಮಾಡುತ್ತಾ ಸಾಕಷ್ಟು ವಚನಗಳನ್ನು ಈ ನಾಡಿಗೆ ನೀಡಿದ್ದಾರೆ ಅವೆಲ್ಲವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಅರವಿಂದ ಮಂಗಳೂರ , ಗ್ರಾಮೀಣ ಮಂಡಲದ ಅಧ್ಯಕ್ಷ ಮಹಾಂತಗೌಡ ಪಾಟೀಲ್ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಸೂಗುರೇಶ ನಾಗಲೋಟಿ ನಗರಸಭೆ ಮಾಜಿ ಅಧ್ಯಕ್ಷ ಲಕ್ಷ್ಮಣ ಗುರಂ ನಗರಸಭೆ ಮಾಜಿ ಸದಸ್ಯ ಮಹಾಂತೇಶ ಕರ್ಜಗಿ , ಮಂಜುನಾಥ ಹೊಸಮನಿ ಮುಖಂಡರಾದ ಮಲ್ಲಿಕಾರ್ಜುನ ಗಡಿಯನ್ನವರ, ರಾಘವೇಂದ್ರ ಸೂರೆ, ರಾಜೆಂದ್ರ ಆರಿ, ಚಿದಾನಂದ ಚಿನ್ನಾಪುರ, ಶಂಕರ ಬಂಡಿ, ಕಪಿಲ್ ಪವಾರ, ಶಿವರಾಜ ಹಾವರಗಿ, ವಿಜಯ ಜಾಲಗಾರ, ವೀರೇಶ ಮನ್ನಾಪುರ, ಮಹಾಂತೇಶ ಬಂಡಿ ಇದ್ದರು.