Dasimayya Jayanti ದೇವರ ದಾಸಿಮಯ್ಯ ಜಯಂತಿ ಆಚರಣೆ
ಬಾಗಲಕೊಟ ಜಿಲ್ಲೆಯ ಇಳಕಲ್‌ದ ನೇಕಾರ ಸಮುದಾಯ ಒಕ್ಕೂಟದ ವತಿಯಿಂದ ಬುಧವಾರದಂದು ದೇವರ ದಾಸಿಮಯ್ಯ
ಜಯಂತಿ ಯನ್ನು ದಾಸಿಮಯ್ಯ ಸರ್ಕಲ್ ನಲ್ಲಿ ಮುಂಜಾನೆ ೧೦ ಗಂಟೆಗೆ ಆಚರಿಸಲಾಯಿತು.
ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಇಳಕಲ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ
ಸತೀಶ ಸಪ್ಪರದ ಮಾತನಾಡಿ ದಾಸಿಮಯ್ಯ ವಚನಗಳನ್ನು ಮೊದಲಿಗೆ ಬರೆದು ಇಡೀ ಮನುಕುಲವನ್ನು
ಉದ್ದಾರ ಮಾಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗುರಂ , ಅರ್ಬನ್ ಬ್ಯಾಂಕ್ ನಿರ್ದೇಶಕ ಪಂಪಣ್ಣ ಕಾಳಗಿ ಅಶೋಕ ಶ್ಯಾವಿ,
ಮಲ್ಲಣ್ಣ ಇಂದರಗಿ, ನಾರಾಯಣ ಕಂದಿಕೊAಡ, ನಗರಸಭೆಯ ಸದಸ್ಯ ಅಮೃತ ಬಿಜ್ಜಳ, ವಿಠ್ಠಲ ಅರಳಿಕಟ್ಟಿ,
ಮಂಜುನಾಥ ಸಪ್ಪರದ, ಲಕ್ಷ್ಮೀಕಾಂತ ಗೌಡರ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)