World Yoga Day ಜೂ.21 ರಂದು ವಿಶ್ವ ಯೋಗ ದಿನ ಆಚರಣೆ : ಡಾ.ಮಹಾಂತೇಶ ಕಡಪಟ್ಟಿ
ಹುನಗುಂದ: ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ ಹಾಗೂ ಅದರ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಜೂ.21 ರಂದು ಬೆಳಗ್ಗೆ 7 ಗಂಟೆಗೆ ವಿ.ಮ.ಪ್ರೌಢ ಶಾಲೆಯ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಹೇಳಿದರು.

ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಬುಧವಾರ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಏಳಿಗೆಗಾಗಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಮಾಡುತ್ತಿದ್ದು ಆದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದು ಹಾಗೆ ಈ ಒಂದು ಯೋಗ ದಿನಾಚರಣೆಯಲ್ಲಿ ಪಟ್ಟಣದ ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸಂಘದ ನಿರ್ದೇಶಕರಾದ ಎಂ.ಎಸ್. ಮಠ, ಅರುಣೋದಯ ದುದ್ಗಿ, ರವಿ ಹುಚನೂರ, ಡಾ.ಎಸ್.ಎಚ್.ಮುದಗಲ್ಲ, ಎಂ.ಐ.ಕತ್ತಿ, ಬಸವರಾಜ ಕೆಂದೂರ, ಆಡಳಿತಾಧಿಕಾರಿ ಆರ್.ಎಸ್.ಬ್ಯಾಳಿ ಇದ್ದರು.







