ಸಿಇಟಿ ಪರೀಕ್ಷೆ: ಬಸ್ ನಿಲ್ದಾಣ ವಿದ್ಯಾರ್ಥಿಗಳಿಂದ ಭರ್ತಿ
ಇಳಕಲ್ ೧೮-ಪಿಯುಸಿ ಪರೀಕ್ಷೆ ಮುಗಿಸಿ ಸಿಇಟಿ ಪರೀಕ್ಷೆ ಕಟ್ಟಿದ ವಿದ್ಯಾರ್ಥಿಗಳು ಗುರುವಾರದಂದು ನಡೆಯುವ ಪರೀಕ್ಷೆ ಎದುರಿಸಲು ಬಾಗಲಕೋಟೆಯತ್ತ ಪಯಣ ಬೆಳೆಸಿದ್ದು ಬಸ್ ನಿಲ್ದಾಣ ಅವರಿಂದಾಗಿ ಗಿಜಿಗಿಜಿ ಎನ್ನುತಿತ್ತು.
ನಗರದಲ್ಲಿ ಇರುವ ಎಂಟು ಪಿಯು ಕಾಲೇಜುಗಳಲ್ಲಿ ಪಿಯುಸಿ ಪಾಸಾಗಿ ಸಿಇಟಿ ಪರೀಕ್ಷೆಗಾಗಿ ಬಸ್ ಹಿಡಿಯಲು ತಮ್ಮ ಪಾಲಕರ ಜೊತೆಗೆ ನಿಂತುಕೊಂಡ ದೃಶ್ಯಗಳನ್ನು ಬಸ್ ನಿಲ್ದಾಣದಲ್ಲಿ ಮುಂಜಾನೆಯ ಸಮಯ ನೋಡಬಹುದಾಗಿತ್ತು.
ತಮ್ಮ ತಮ್ಮ ಬ್ಯಾಗಗಳನ್ನು ಹೊತ್ತುಕೊಂಡು ವಿದ್ಯಾರ್ಥಿಗಳು ಬಸ್ ಹಿಡಿಯಲು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು.