ಸರಿಗಮಪ ಲಿಟ್ಲ ಛಾಂಪಿಯನ್ ಪ್ರಗತಿಗೆ ಸತ್ಕಾರ
ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದೇವತೆ ಶ್ರೀ ದ್ಯಾಮಮ್ಮದೇವಿ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಝೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ ಚಾಂಪ್ಸ್ ೧೯ರ ವಿಜೇತೆ ಪ್ರಗತಿ ಬಸವರಾಜ ಬಡಿಗೇರ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.
ಪ್ರಗತಿ ಬಡಿಗೇರ, ತಂದೆ ಬಸವರಾಜ ಬಡಿಗೇರ, ಸಹೋದರಿಯರಾದ ತ್ರಿವೇಣ, ಪ್ರತೀಕ್ಷಾ, ಮೌನೇಶ ಬಡಿಗೇರ, ಕುಮಾರ ರಾಠೋಡ ಅವರು ಹಾಡು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಬಳಿಕ ಗ್ರಾಮದ ವತಿಯಿಂದ ಗಾಯಕಿ ಪ್ರಗತಿ ಬಡಿಗೇರ ಸತ್ಕರಿಸಿ ಸನ್ಮಾಯಿಸಲಾಯಿತು.