Chennamma Jayanti ತುಂಬ ಗ್ರಾಮದಲ್ಲಿ ಚೆನ್ನಮ್ಮ ಜಯಂತಿ ಆಚರಣೆ
ಇಳಕಲ್ಲ : ತಾಲೂಕಿನ ತುಂಬ ಗ್ರಾಮದಲ್ಲಿ ವೀರರಾಣಿ ಚೆನ್ನಮ್ಮನ ಜಯಂತಿಯನ್ನು ಗುರುವಾರದಂದು
ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಸಮಾಜದ ಮುಖಂಡ ಮಲ್ಲಿಕಾರ್ಜುನ ಕರಡಿ ಮಾತನಾಡಿ
ಸ್ವಾತಂತ್ರ‍್ಯದ ಕಿಚ್ಚು ಹಚ್ಚಿದ ಧೀರ ದಿಟ್ಟ ಮಹಿಳೆ ಚನ್ನಮ್ಮ ದೇಶದ ಜನ ತಾವಿರುವ ಪ್ರದೇಶದಲ್ಲಿ ಗೌರವದಿಂದ ಬದುಕ
ಬೇಕಾದರೇ ಸ್ವಾತಂತ್ರ‍್ಯ ಬಹಳ ಮುಖ್ಯ ಎಂದು ತಿಳಿದಿದ್ದರು.ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ
ಕಾಯ್ದೆಯನ್ನು ವಿರೋಧಿಸಿದ ರಾಣಿ ಚನ್ನಮ್ಮ ಅವರು ಬ್ರಿಟಿಷರಿಗೆ ಸಲ್ಲಿಸಬೇಕಾಗಿದ್ದ ಕಪ್ಪ ಕಾಣಿಕೆ ಕೊಡುವುದನ್ನು ನಿರಾಕರಿಸಿದ್ದ
ವೀರ ಮಹಿಳೆ’ ಎಂದು ಬಣ್ಣಿಸಿದರು.ಜಯಂತಿಯಲ್ಲಿ ವಿಜಯಕುಮಾರ ನಾಗೂರ, ಚಂದ್ರು ಪಾಟೀಲ , ಅಮರೇಶ ನಾಗೂರ,
ಶರಣು ಪಾಟೀಲ , ಕುಮಾರ ಹಿರೇಮಠ , ವಿನಯಕುಮಾರ ಹಿರೇಮಠ,ಶಿವು ನಾಗೂರ ಇದ್ದರು.






