Chirpili Kalarava ಸಂಭ್ರಮದಿಂದ ನಡೆದ ಚಿಲಿಪಿಲಿ ಕಲರವ ಮೇಳ
ಇಳಕಲ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹುನಗುಂದ್ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಜಿಲ್ಲಾ ಸಂತೆ ಬಾಗಲಕೋಟ ಇವರ ಸಹಯೋಗದಲ್ಲಿ ಅಂಗನವಾಡಿ ಶಿಕ್ಷಕರಿಗಾಗಿ ಒಂದು ದಿವಸದ ಶಾಲಾ ಪೂರ್ವ ಶಿಕ್ಷಣ ಕುರಿತು ಶಿಕ್ಷಕರ ಮೇಳವನ್ನು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ೯ರಲ್ಲಿ ಚಿಲಿಪಿಲಿ ಕಲರವ ಮೇಳವನ್ನು ಹುನಗುಂದ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಿರಿತಮ್ಮನ್ನವರ್ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕಿಯರು ರೂಪಿಸಿದ ಚಟುವಟಿಕೆಗಳನ್ನು ನೀವೆಲ್ಲ ನಿರಂತವಾಗಿ ನಿಮ್ಮ ಕೇಂದ್ರಗಳಲ್ಲಿ ಮಕ್ಕಳಿಗೆ ಮಾಡಬೇಕು. ತಾಲೂಕಿನ ಎಲ್ಲ ಕೇಂದ್ರಗಳು ಮಾದರಿ ಕೇಂದ್ರಗಳಾಗುವಲ್ಲಿ ಕಾರ್ಯನಿರ್ವಾಹಿಸಿರಿ ಎಂದು ತಿಳಿಸಿದರು.
ಚಿಲಿಪಿಲಿ – ಕಲರವ ಮೇಳವು ಮುಖ್ಯವಾಗಿ ಶಾಲಾ ಪೂರ್ವ ಶಿಕ್ಷಣದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ದೈಹಿಕ ಬೆಳವಣಿಗೆ, ಭಾಷಾ ಹಾಗೂ ಭೌದ್ಧಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆಯ ಜೊತೆಗೆ ಮಾದರಿ ಅಂಗನವಾಡಿ ಕೇಂದ್ರ ಹೇಗಿರಬೇಕು, ಕೇಂದ್ರದಲ್ಲಿ ಯಾವೆಲ್ಲ ಚಟುವಟಿಕೆಗಳು ಇರಬೇಕು ಎನ್ನುವದನ್ನು ಡೆಮೋ ಮಾಡಿ ತೋರಿಸಿದರು.
ಹುನಗುಂದ ತಾಲೂಕಿನ ೧೫ ಅಂಗನವಾಡಿ ಸರ್ಕಲ್ ಗಳಿಂದ ವತಿಯಿಂದ ಆಯ್ದ ೪೫ ಅಂಗನವಾಡಿ ಶಿಕ್ಷಕಿಯರು ಅಂಗನವಾಡಿ ಶಾಲಾ ಪೂರ್ವ ಶಿಕ್ಷಣದ ಎಲ್ಲ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.
ತಾಲೂಕು ಪಂಚಾಯಿತಿನ ಕಾರ್ಯನಿರ್ವಾಹಕ ಅಧಿಕಾರಿಗ ಮುರಳೀಧರ ದೇಶಪಾಂಡೆ ಇವರು ಮೇಳಕ್ಕೆ ಆಗಮಿಸಿ ಶಿಕ್ಷಕಿಯರು ಮಾಡಿರುವ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮೇಳದಲ್ಲಿ ಅಂಗನವಾಡಿ ಹಿರಿಯ ಮೇಲ್ವಿಚಾರಕಿಯರಾದ ಶೀವಲೀಲಾ ಸರಗಣಾಚಾರಿ, ವಿಜಿಯಾ ಶಿರೂರ್, ಮೇಲ್ವಿಚಾರಕಿಯರಾದ ನೇತ್ರಾ ಬಡಿಗೇರ್, ಕಸ್ತೂರಿ ಬಾದಾಮಿ, ರೂಪಾ ಬಿಜಾಪುರ ಮತ್ತು ಮೈತ್ರವತಿ ಶಿರೋಳ್ ಹಾಗೂ ಶಿವಲೀಲಾ ಪಾಟೀಲ್, ರಾಜೇಶ್ವರಿ ಗೌಡರ್ ಆಜೀಮ್ ಪ್ರೇಮ್ ಜಿ ಫೌಂಡೇಶನ್ ಸದಸ್ಯರಾದ ಶ್ರೀಧರ ರಾಜನಾಳ, ದೊಡ್ಡಈರಣ್ಣ, ಶ್ರೀಕಾಂತ, ಮೇಘನಾ, ಯಾಸೀನ್ ಹಾಗೂ ಚೇತನ್ ಇವರು ಉಪಸ್ಥಿತರಿದ್ದರು.
ಒಟ್ಟು ಆರು ಅಂಗನವಾಡಿ ಸರ್ಕಲ್ ಗಳಿಂದ ಒಟ್ಟು ೧೮೦ ಅಂಗನವಾಡಿ ಶಿಕ್ಷಕಿಯರು ಈ ಮೇಳದಲ್ಲಿ ಭಾಗವಹಿಸಿದ್ದರು.