ನೀರನ್ನು ಹಿತಮಿತವಾಗಿ ಬಳಸಲು ಇಳಕಲ್ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಕರೆ
ಸಾರ್ವಜನಿಕರು ನೀರನ್ನು ಹಿತಮಿತವಾಗಿ ಬಳಸಬೇಕು ಎಂದು ಇಳಕಲ್ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಹೇಳಿದರು.
ಬಾಗಲಕೋಟ ಜಿಲ್ಲೆಯ ಇಳಕಲ್ ನಗರಸಭೆಯ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ಜಲದಿನವಾದ ಇಂದು ನೀರಿನ ಬಳಕೆಯ ಬಗ್ಗೆ ವಿಶ್ವದಾದ್ಯಂತ ತೆಗೆದುಕೊಂಡ ನಿರ್ಧಾರವನ್ನು ನಾವೂ ಪಾಲಿಸಬೇಕಾಗಿದೆ.
ನೀರು ಸಾಕಷ್ಟು ಬರುತ್ತದೆ ಎಂದು ವಿನಾಕಾರಣ ಪೋಲು ಮಾಡಬಾರದು ಬಳಕೆಯಲ್ಲಿ ಹಿತಮಿತತೆಯನ್ನು ಹೊಂದಬೇಕು ಬೇಸಿಗೆಕಾಲದಲ್ಲಿ ಕೃಷ್ಣ ನದಿ ನೀರು ಕಡಿಮೆ ಆಗುವ ಆತಂಕ ಇದ್ದು ಇವಾಗಲೇ ನಾವು ನೀರು ಬಳಕೆಯಲ್ಲಿ ಎಚ್ಚರಿಕೆ ವಹಿಸುವದು ಅಗತ್ಯ ಎಂದು ಹೇಳಿದರು.