Co-operatives ಸಹಕಾರ ಸಂಸ್ಥೆಗಳು ವ್ಯವಹಾರದ ಬೆಳವಣಿಗೆಗೆ ಸಹಕಾರಿ : ಬೋದಲೆಬುವಾದಾದಾ ಮಹಾರಾಜರು
ಇಳಕಲ್ : ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎನ್ನು ಸದುದ್ದೇಶ ಹೊಂದಿ ಒಬ್ಬರಿಗೊಬ್ಬರು ಪರಸ್ಪರ ಬೆಳವಣಿಗೆಗೆ ಸಹಕಾರ ಸಂಸ್ಥೆಗಳು ಉತ್ತಮ ಅಡಿಪಾ ಹಾಕುತ್ತವೆ. ಸಹಕಾರ ಸಂಸ್ಥೆಗಳಿAದ ವ್ಯವಹಾರಗಳು ಸುಲಲಿತವಾಗಿ ನಡೆದು ವ್ಯಾಪಾರಗಳು ಪ್ರಗತಿ ಹೊಂದುತ್ತವೆ ಎಂದು ಪಂಡರಾಪುರದ ಸದ್ಗುರು ಹ.ಬ.ಪಾ. ಶ್ರೀ ಬೋದಲೆಬುವಾದಾದಾ ಮಹಾರಾಜರು ಹೇಳಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದ ಇಳಕಲ್ಲದ ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ವಿಶೇಷವಾಗಿ ಸಸಿಗೆ ನೂರುಣಿಸಿ, ದೀಪ ಬೆಳಗಿಸಿದ ಸಂಸ್ಥೆಗೆ ಕಾಮದೇನು ಕಲ್ಪವೃಕ್ಷವಾಗಿ ಬೆಳದು, ಸಂಪದ್ಬರಿತವಾದ ಮನೆ ಕಟ್ಟಿ ದೀಪ ಬೆಳಗುವಂತಾಗಲಿ ಎಂದು ಶುಭ ಆರೈಸಿ, ಸತ್ಕಾರ್ಯ ಮಾಡುವಾಗ ಹೊಗಳಿಕೆ ಹಾಗೂ ನಿಂದನೆಗಳು ಸಹಜ, ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ, ನಿಂದಕರ ಮಾತುಗಳಿಗೆ ಕಿವಿಗೊಡದೆ ಹಿಡಿದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿ ಎಂದು ಹೇಳಿದರು.
ಇದೇ ಸಂಧರ್ಬದಲ್ಲಿ ನೂತನ ಸಹಕಾರ ಸಂಸ್ಥೆಯ ಲೋಗೋ ಮತ್ತು ನಿರ್ದೇಶಕ ಮಂಡಳಿಯ ಸದಸ್ಯರ ನಾಮಫಲಕ ಉದ್ಘಾಟಿಸಿ ನಿರ್ದೇಶಕ ಮಂಡಳಿಯವರಿಗೆ ಪುಷ್ಪ ನೀಡಿ ಆಶೀರ್ವಾದಿಸಿದರು.
ನೂತನ ನಿರ್ದೇಶಕ ಮಂಡಳಿಯ ಸರ್ವ ಸದಸ್ಯರಿಗೆ ಇಲಕಲ್ಲ ಭಾವಸಾರ ಕ್ಷತ್ರಿಯ ಸಮಾಜದ ಪರವಾಗಿ ಗೌರವಿಸಿ ಸನ್ಮಾನಸಲಾಯಿತು.
ಶ್ರೀ ವಿಜಯ ಮಹಾಂತೇಶ ವಿಧ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಭಾವಸಾರ ಸಮಾಜದ ಹಿರಿಯರಾದ ದೀಲಿಪ ದೇಬಗಿರಿಕರ ಅವರು ಮಾತನಾಡಿ ಭಾವಸಾರ ಸಮಾಜದ ಬಹು ದಿನದ ಕನಸನ್ನು ಯುವಕರು ಸಾಧಿಸಿದ್ದಾರೆ, ಮುಂದಿನ ದಾರಿಯಲ್ಲಿ ಯಶಸ್ಸು ಸಿಗಲಿ, ಸಮಾಜ ಯಾವತ್ತು ಸಂಸ್ಥೆಯ ಪರವಾಗಿದ್ದು ಏಳ್ಗೆಯನ್ನು ಬಯಸುತ್ತದೆ ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ ಹಂಚಾಟೆ ಅವರು ಮಾತನಾಡಿ ಸಂಸ್ಥೆ ಕಟ್ಟಲು ಸಮಾಜದ ಹಾಗೂ ನಗರದ ಜನತೆಯ ಸಹಕಾರವನ್ನು ಸ್ಮರಿಸಿದರು. ಯಾವುದೇ ಒಬ್ಬ ವ್ಯಕ್ತಿಯಿಂದ ಒಂದು ಸಂಸ್ಥೆ ಕಟ್ಟಲು ಸಾಧ್ಯವಿಲ್ಲ, ಎಲ್ಲರ ಸಹಕಾರ ಹಾಗೂ ಉತ್ತಮ ಮನಸ್ಸಿದ್ದರೆ ಏನೆಲ್ಲಾ ಸಾಧಿಸಬಹುದು ಎಂದು ಪ್ರಾಸ್ಥಾವಿಕವಾಗಿ ನುಡಿದರು. ಸಂಸ್ಥಾಪಕ ಉಪಾಧ್ಯಕ್ಷ ಸುನೀಲ್ ದೇವಗಿರಿಕರ ಹಾಗೂ
ಭಾವಸಾರ ಕ್ಷತ್ರಿಯ ಸಮಾಜದ ಹಿರಿಯರಾದ ಲಕ್ಷ್ಮಣ ಮಹೇಂದ್ರಕರ, ಡಾ. ನಾರಾಯಣರಾವ ಅಂಬೋರೆ ಹಾಗೂ ಕೃಷ್ಣಾಜಿ ಮಹೇಂದ್ರಕರ ಉಪಸ್ಥಿತರಿದ್ದು ಉದ್ಘಾಟನಾ ಸಂದರ್ಭದಲ್ಲಿ ಶೇರು ಪ್ರಮಾಣ ಪತ್ರ, ಹಿಂಗ್ಲಾಜ್ ಠೇವು ಪತ್ರ ಹಾಗೂ ಉಳಿತಾಯ ಖಾತೆ ಪುಸ್ತಕವನ್ನು ಸದಸ್ಯರಿಗೆ ವಿತರಿಸಿದರು.
ರಾಮಕೃಷ್ಣ ಹಂಚಾಟೆ ಸ್ವಾಗತಿಸಿದರು, ಜಮದಗ್ನಿ ಮಹೇಂದ್ರಕರ ವಂದಿಸಿರು, ಭಾಗ್ಯಶ್ರೀ ದೇವಗಿರಿಕರ ನಿರೂಪಿಸಿದರು.