Municipal ನಗರಸಭೆಗೆ ಪ್ರಶಂಸಾ ಪ್ರಶಸ್ತಿ ಪ್ರಧಾನ
ಇಳಕಲ್ : ಕರ್ನಾಟಕ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ವತಿಯಿಂದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಸ್ಥರ
ಸ್ವನಿಧಿ ಸಹಾಯ ಯೋಜನೆಯನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಇಲ್ಲಿನ ನಗರಸಭೆಗೆ ಮತ್ತು ಬೀದಿ ಬದಿ
ವ್ಯಾಪಾರಿ ಯಲ್ಲಪ್ಪ ಪೋತಾಗೆ ಪ್ರಶಂಸಾ ಪತ್ರವನ್ನು ಗುರುವಾರದಂದು ನಡೆದ ಸಮಾರಂಭದಲ್ಲಿ ಬೆಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು.
ಈ ಸಮಯದಲ್ಲಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಬಡೇಸಾಬ, ಯಲ್ಲಪ್ಪ ಪೋತಾ
ಪ್ರಶಂಸಾ ಪ್ರಶಸ್ತಿಯನ್ನು ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ ಅವರಿಂದ ಪಡೆದುಕೊಂಡರು.