ಅಂಜಲಿ ಕೊಲೆ ಖಂಡಿಸಿ ನಗರದ ತಹಸೀಲ್ದಾರ ಕಚೇರಿ ಮುಂದೆ ಪ್ರತಿಭಟಿಸಿ : ಮನವಿ ಸಲ್ಲಿಕೆ
ಇಳಕಲ್ : ಹುಬ್ಬಳ್ಳಿಯ ಯುವತಿ ಅಂಜಲಿ ಅಂಬಿಗೇರ ಕೊಲೆ ಹತ್ಯೆಯನ್ನು ಖಂಡಿಸಿ ಇಳಕಲ್ಲ ದ ಅಂಬಿಗೇರ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಸತೀಶ್ ಕೂಡಲಗಿ ಅವರಿಗೆ ಮನವಿಪತ್ರವನ್ನು ಅರ್ಪಿಸಲಾಯಿತು.
ಸಮಾಜದ ಅಧ್ಯಕ್ಷ ಬಸವರಾಜ ಜುಮಲಾಪೂರ ನೇತೃತ್ವದಲ್ಲಿ ಹಿರಿಯರು ಮತ್ತು ಯುವಕರು ತಹಸೀಲ್ದಾರ ಕಚೇರಿಗೆ ತೆರಳಿ ಅಲ್ಲಿ ಘೋಷಣೆಗಳನ್ನು ಕೂಗಿ ಕೊಲೆ ಮಾಡಿದ ವ್ಯಕ್ತಿಗೆ ಗಲ್ಲು ಶಿಕ್ಷೆ ನೀಡಬೇಕು ಮೃತ ಅಂಜಲಿ ಕುಟುಂಬಕ್ಕೆ ಐವತ್ತು ಲಕ್ಷ ಹಣ ಪರಿಹಾರ ಕೊಡಬೇಕು ಹಾಗೂ ಅವರ ಕುಟುಂಬದ ಓರ್ವ ವ್ಯಕ್ತಿಗೆ ಸರಕಾರಿ ನೌಕರಿ ನೀಡಬೇಕು ಎಂದು ಯಮನೂರ ಹಂಚಿನಾಳ ಹೇಳಿದರು.
ಈ ಸಮಯದಲ್ಲಿ ಗದ್ದೆಪ್ಪ ತಪ್ಪಲದಡ್ಡಿ, ಪುಲಕೇಶಿ ಸುಣಗಾರ, ಹುಲ್ಲಪ್ಪ ಕಿಡದೂರು, ಮಲ್ಲು ಐಹೊಳೆ, ಮಲ್ಲು ಕನಕೇರಿ, ಸುನೀಲ ತಪ್ಪಲದಡ್ಡಿ, ಶಶಿ ಅಡಿಹಾಳ, ಸಾಯಿನಾಥ ತಪಲ್ಲದಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ