
ಇಂಧನ ದರ ಏರಿಕೆ ಖಂಡಿಸಿ : ಕರವೇ ಪ್ರತಿಭಟನೆ
ಹುನಗುಂದ : ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ ಕ್ರಮ ಖಂಡಿಸಿ ಹುನಗುಂದ-ಇಳಕಲ್ಲ ತಾಲೂಕು ಕರವೇ ಮುಖಂಡರು ಪ್ರತಿಭಟನೆ ನಡೆಸಿ ಶಿರಸ್ತೇದಾರ ಎಚ್.ಎಂ. ಶಿವಣಗಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ದೇಶದೆಲ್ಲಡೆ ಬೆಲೆ ಏರಿಕೆಯಿಂದ ಬಡ ಜನರು ತತ್ತರಿಸಿದ್ದಾರೆ. ಈಗಾಗಲೇ ಆಹಾರ ಮತ್ತು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಈಗ ಇಂಧನದ ಬೆಲೆ ಏರಿಕೆಯಿಂದ ಸಾರಿಗೆಯ ಪ್ರಯಾಣ ದರ ಹೆಚ್ಚಿಗೆ ಆಗಿದೆ.

ವಾಹನ ಸವಾರರಿಗೂ ಹೊರೆಯಾಗಲಿದೆ. ರಾಜ್ಯದ ಸರಕು ಮತ್ತು ಆಮದು, ರಫ್ತುಗಳ ವ್ಯಾಪಾರದಲ್ಲಿಯೂ ದರ ಹೆಚ್ಚಿಗೆ ಆಗಿದ್ದು, ತೆರಿಗೆ ಹೆಸರಿನಲ್ಲಿ ಜನರಿಂದಾನೇ ತೆರಿಗೆ ಲೂಟಿ ಮಾಡುತ್ತಿದ್ದೀರಿ ಎಂದು ದೂರಿದರು.
ಕರ್ನಾಟಕದ ಇತಿಹಾಸದಲ್ಲೇ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆ ಹಾಗೂ ಯೋಜನೆಗಳನ್ನು ಪೂರೈಸಲಾಗದೆ ರಾಜ್ಯದ ಖಜಾನೆ ಬರಿದು ಮಾಡಿದೆ. ಈ ಸರ್ಕಾರ ಜನಕಲ್ಯಾಣ ಮರೆತು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆರಂಭವಷ್ಟೇ, ಇನ್ನು ರಾಜ್ಯದಲ್ಲಿ ಪ್ರತಿ ವಸ್ತುಗಳ ಬೆಲೆಗಳೂ ಗಗನಕ್ಕೇರಲಿದ್ದು, ಜನಸಾಮನ್ಯರು, ಕಾರ್ಮಿಕರು, ಬಡವರು, ರೈತರು ಹಾಗೂ ಮದ್ಯಮ ವರ್ಗದವರು ಚಕ್ರವ್ಯೂಹದಲ್ಲಿ ಸಿಲುಕಿ ನಲಗುವ ಪರಿಸ್ಥಿತಿ ನಿರ್ಮಿಸಿದೆ. ಕೂಡಲೇ ಈ ನಿರ್ಧಾರ ಹಿಂಪಡೆದುಕೊಳ್ಳಬೇಕೆAದು ಆಗ್ರಹಿಸಿದರು.
ಕರವೇ ಅಧ್ಯಕ್ಷ ರೋಹಿತ ಬಾರಕೇರ, ಕಾರ್ಯದರ್ಶಿ ಜಹೀರ್ ಸಂಗಮಕರ, ಇಳಕಲ್ಲ ತಾಲೂಕು ಅಧ್ಯಕ್ಷ ಮಹಾಂತೇಶಗೌಡ ವಂಕಲಕುAಟಿ, ಹುಸೇನ ಸಂಧಿಮನಿ, ರಾಹುಲ್ ಶೆಟ್ಟರ, ಗಣೇಶ ನಾಯಕ, ಅಶೋಕ ಪೂಜಾರಿ, ಮಹಾಂತೇಶ ಪೂಜಾರಿ, ಮಹಾಂತೇಶ ಕಲಾದಗಿ, ಹಸನ ಕಲಕಬಂಡಿ, ಮೌಲಪ್ಪ ಮಾದರ, ಪ್ರವೀಣ ವಾಲಿಕಾರ, ಮಂಜು ವಡ್ಡರ, ಸೋಹಿಲ್ ಸುತಾರ, ಸಂಗಮೇಶ ಸಜ್ಜನ, ಕುಮಾರ ಸಜ್ಜನ, ನವೀದ್ ಅಹಮ್ಮದ್ ಸಂದಿಮನಿ ಇತರರಿದ್ದರು.





