ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದ ನೇಹಾ ಹತ್ಯೆಯನ್ನು ಇಳಕಲ್ ನಗರದ ಹಿಂದೂ ಜಾಗರಣ ವೇದಿಕೆ ಖಂಡಿಸಿ ಶುಕ್ರವಾರದಂದು ಸಾಯಂಕಾಲ ಪ್ರತಿಭಟನೆಯನ್ನು ನಡೆಸಿದರು.
ನಗರದ ಕಂಠಿ ಸರ್ಕಲ್ ದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗೊರಬಾಳ ನಾಕಾ ಮೂಲಕ ತಹಸೀಲ್ದಾರ್ ಕಚೇರಿ ತಲುಪಿ ತಹಸೀಲ್ದಾರ್ ಸತೀಶ್ ಕೂಡಲಗಿ ಅವರಿಗೆ ಮನೆ ಮನವಿ ಪತ್ರವನ್ನು ಅರ್ಪಿಸಿ ಮಾತನಾಡಿದ ಗುರುಲಿಂಗ ಅಂಗಡಿ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯನ್ನು ನೀಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಿವು ಚಿಲವೇರಿ, ಎಂ.ಆರ್.ಪಾಟೀಲ, ತೃಪ್ತಿ ಸಾಲಿಮಠ ಹಾಗೂ ಹಿಂದೂ ಜಾಗರಣಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.