ನೇಹಾ ಹತ್ಯೆಯನ್ನು ಖಂಡಿಸಿ : ಕರವೇ ಹಾಗೂ ವಿವಿಧ ಸಂಘಟನೆಗಳಿ0ದ ಪ್ರತಿಭಟನೆ : ತಹಸೀಲ್ದಾರರಿಗೆ ಮನವಿ ಸಲ್ಲಿಕೆ
ಹುಬ್ಬಳ್ಳಿಯ ವಿಬಿವಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಅವರ ಹತ್ಯೆಯನ್ನು ಹುನಗುಂದ ಇಳಕಲ್ ತಾಲೂಕಾ ಶಿವರಾಮೇಗೌಡ್ರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಖಂಡಿಸಿ ಶನಿವಾರದದು ಮಧ್ಯಾಹ್ನ ೨ ಗಂಟೆಗೆ ಪ್ರತಿಭಟನೆಯನ್ನ ನಡೆಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಕಾರ್ಯಾಲಯದಲ್ಲಿ ರಾಜ್ಯಪಾಲರಿಗೆ ತಹಸೀಲ್ದಾರ ನಿಂಗಪ್ಪ ಬಿರಾದಾರ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಶರಣು ಗಾಣಿಗೇರ ನೇಹಾ ಎಂಬ ಯುವತಿಯನ್ನು ಹತ್ಯೆ ಮಾಡಿರುವ ಆರೋಪಿಗೆ ಸರಕಾರ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಇಲ್ಲದಿದ್ದರೆ ಮುಂದೆ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮುತ್ತಣ್ಣ ಕಲ್ಮಡಿ, ಮಹಾಂತೇಶ್ ಜಗಳೂರು, ಮುತ್ತಣ್ಣ ಚಲವಾದಿ ಹನುಮಂತ್ ರಾಮವಾಡಗಿ ಹಿರಿಯ ಹೋರಾಟಗಾರ ನಾಗರಾಜ್ ಹೊಂಗಲ್ ಹಾಗೂ ಈ ಒಂದು ಹೋರಾಟಕ್ಕೆ ವೇದಮೂರ್ತಿ ಮಹಾಂತಯ್ಯ ಕಚ್ಚಿನಮಟ್ಟಿ ಭಾಗವಹಿಸಿದ್ದರು.