Condemn serial murders of girls: GIO urges strict punishment for culprits ಹೆಣ್ಣು ಮಕ್ಕಳ ಸರಣಿ ಕೊಲೆಗಳನ್ನು ಖಂಡಿಸಿ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಐಓ ಒತ್ತಾಯ

WhatsApp Group Join Now
Telegram Group Join Now
Instagram Group Join Now
Spread the love

 

ಹೆಣ್ಣು ಮಕ್ಕಳ ಸರಣಿ ಕೊಲೆಗಳನ್ನು ಖಂಡಿಸಿ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಐಓ ಒತ್ತಾಯ

 

ಹೆಣ್ಣು ಮಕ್ಕಳ ಸರಣಿ ಕೊಲೆಗಳನ್ನು ಖಂಡಿಸಿ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಐಓ ಒತ್ತಾಯ

 

ಇಳಕಲ್ : ರಾಜ್ಯದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮಹಿಳೆಯರ ಮೇಲಿನ ಸರಣಿ ಅತ್ಯಾಚಾರ ಕೊಲೆಗಳನ್ನು ತಡೆಯಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಮಾತೆ ಇಸ್ಲಾಮೀ ಹಿಂದ್ ಮಹಿಳಾ ಘಟಕ ಹಾಗೂ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೆಶನ್ ವತಿಯಿಂದ ನಗರದ ಕಂಠಿ ಸರ್ಕಲ್‌ದಲ್ಲಿ ಪ್ರತಿಭಟಿಸಿದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಜಿ ಆಯ್,ಓ ರಾಜ್ಯ ಸಂಚಾಲಕಿ ಸೀಮಾ ಹುಮ್ನಾಬಾದ ಮಾತನಾಡಿ ಕಳೆದೆರಡು ತಿಂಗಳಿನಿAದ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲಿನ ನಿರಂತರ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳು ಸಮಾಜದಲ್ಲಿ ಭೀತಿಯನ್ನು ಸೃಷ್ಟಿಸಿದೆ. ಈ ರೀತಿಯ ಕೃತ್ಯಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವ ಮಾಡಿದೆ.

ಇತ್ತೀಚೆಗೆ ವರದಿಯಾಗುತ್ತಿರುವ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಅಪರಾಧಿಯ ಧರ್ಮ ಮತ್ತು ಜಾತಿಯನ್ನು ಹುಡುಕುವ ಮನಸ್ಥಿತಿಯೂ ಅತ್ಯಂತ ಅಪಾಯಕಾರಿ ಬೆಳವಣಿಯಾಗಿದೆ ಎಂದರು.
ಗುಲ್ನಾಜ್ ಬೇಪಾರಿ ಮಾತನಾಡಿ ಸೂಕ್ಷ್ಮ ಪ್ರಕರಣಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಹೊತ್ತಿರುವ ದೃಶ್ಯ ಮಾಧ್ಯಮಗಳು ವರದಿ ಮಾಡುವ ಸಂದರ್ಭದಲ್ಲಿ ಕಪೋಲಕಲ್ಪಿತ ವಿಚಾರಗಳನ್ನು ಮತ್ತು ಒಂದು ನಿರ್ದಿಷ್ಟ ಕೋಮಿನ ವಿರುದ್ಧ ಕೋಮುದ್ವೇಷ ಹರಡುವ ವರದಿ ಮಾಡುತ್ತಿರುವುದು ಮಾಧ್ಯಮ ವೃತ್ತಿಗೆ ಮಾಡುತ್ತಿರುವ ದ್ರೋಹವಾಗಿದೆ. ಇಂತಹ ವಿಷಕಾರಿ ಚಿಂತನೆಗಳನ್ನು ಬಿತ್ತುವ ಮುದ್ರಣ ದೃಶ್ಯ ಮಾಧ್ಯಮದ ಸುದ್ದಿ ಚಾನೆಲ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಎಸ್, ಆಯ್, ಓ ರಾಜ್ಯ ಕಾರ್ಯದರ್ಶಿ ಮುಹ್ಮದ ಪೀರ್ ಲಟಗೇರಿ ಮಾತನಾಡಿ ಹೆಣ್ಣನ್ನು ಭೋಗದ ವಸ್ತುವೆಂದು ಬಗೆದು ತನಗಿಷ್ಟ ಬಂದAತೆ ಅದನ್ನು ಬಳಸಿಕೊಳ್ಳುವ ಹಕ್ಕು ಇದೆಯೆಂಬ ಗಂಡಿನ ಪ್ರವೃತ್ತಿಯೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದೆ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಜಾಗರೂಕತೆಯಿಂದ ಮತ್ತು ಅಷ್ಟೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದೆ. ಈ ರೀತಿಯ ದುಷ್ಕೃತ್ಯದ ವಿರುದ್ಧ ಬಹಳ ಕಠಿಣ ನಿಲುವನ್ನು ತಾಳಬೇಕು ಈ ಬಗೆಯ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ತರಬೇಕಾಗಿದೆ.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ಥಳಕ್ಕೆ ಅಗಮಿಸಿದ ಗ್ರೇಡ್ ೨ ತಹಸೀಲ್ದಾರ ಈಶ್ವರ ಗಡ್ಡಿ ಅವರಿಗೆ ಮನವಿ ಪತ್ರವನ್ನು ನೀಡಿದರು. ಈ ಸಮಯದಲ್ಲಿ ಜಮಾಅತೆ ಇಸ್ಲಾಮೀ ಮಹಿಳಾ ವಿಭಾಗದ ಸಂಚಾಲಕಿ ಹನೀಫಾ ಹುಣಚಗಿ, ಆಯಿಶಾ ತಹಶೀಲ್ದಾರ, ಜಮಾಅತೆ ಇಸ್ಲಾಮೀ ವಿಭಾಗೀಯ ಸಂಚಾಲಕ ಮೆಹಬೂಬ ಆಲಂ ಬಡಗನ್, ಸ್ಥಾನೀಯ ಅಧ್ಯಕ್ಷ ಸಯೀದ ಅಹ್ಮದ ಕೊತ್ವಾಲ, ಅಬ್ದುಲ್ ಗಫಾರ ತಹಶೀಲ್ದಾರ,ಹಬಿಬುಲ್ಲಾಹ ತಾವರಗೇರಿ,ಹುಸೇನಬಾಷಾ ಸೂಳಿಭಾವಿ, ಮುಹ್ಮದ ಗೌಸ ಗಡಾದ, ಮುರ್ತುಜಾ ಕಾಕಬಾಳ ಮತ್ತಿತರರು ಇದ್ದರು.

ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)       


Spread the love

Leave a Comment

error: Content is protected !!