ಗದಗದ ನಾಲ್ವರ ಹತ್ಯೆಯನ್ನು ಖಂಡಿಸಿ : ಎಸ್ಎಸ್ಕೆ ಸಮಾಜ ಪ್ರತಿಭಟನೆ
ಗದಗದಲ್ಲಿ ನಡೆದ ಬಾಕಳೆ ಪರಿವಾರದ ನಾಲ್ವರ ಹತ್ಯೆಯನ್ನು ಖಂಡಿಸಿ ಇಳಕಲ್ಲದ ಎಸ್.ಎಸ್.ಕೆ. ಸಮಾಜದ ವತಿಯಿಂದ ಶನಿವಾರದಂದು ಪ್ರತಿಭಟನೆಯನ್ನು ಮಾಡಿ ತಹಸೀಲ್ದಾರ ಸತೀಶ ಕೂಡಲಗಿ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು.
ಗದಗ ನಗರದ ದಾಸರ ಓಣಿಯಲ್ಲಿ ಪ್ರಕಾಶ ಬಾಕಳೆರವರ ನಿವಾಸದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಬಾಗಿಲು ತೆರೆದು ಮಲಗಿದ್ದ ಜಾಗದಲ್ಲಿಯೇ ನಾಲ್ವರನ್ನು ತುಂಬಾ ಘೋರವಾಗಿ ಮತ್ತು ಅಮಾನವೀಯವಾಗಿ ಹತ್ಯೆಗೈದು ಪರಾರಿಯಾಗಿದ್ದು ನಿಜಕ್ಕೂ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.ಈ ಕೃತ್ಯದ ಹಿಂದೆ ಯಾವೆಲ್ಲ ದುಷ್ಟ ಶಕ್ತಿಗಳ ಕೈವಾಡವಿದೆ ಮತ್ತು ಇದು ಸಮಯೋಚಿತ ಕೃತ್ಯವಾಗಿದ್ದು, ಅದರ ಹಿಂದೆ ಬಹುದೊಡ್ಡ ಷಡ್ಯಂತರವೇ ನಡೆದಿದೆ ಎನ್ನುವ ಅನುಮಾನ ಕಾಡುತ್ತಿದೆ ಹೀಗಾಗಿ ಪಕ್ಷಾತೀತವಾಗಿ, ಜ್ಞಾತಾತೀತವಾಗಿ ಸಮಗ್ರ ತನಿಖೆ ನಡೆಸಿ ದುಷ್ಕರ್ಮಿಗಳು ಎಷ್ಟೇ ಪ್ರಭಾವ ಶಾಲಿಯಾಗಿದ್ದರು ನಿರ್ಧಾಕ್ಷಣ್ಯವಾಗಿ ಬಂಧಿಸಬೇಕು ಎಂದು ಸಮಾಜದ ಅಧ್ಯಕ್ಷ ಏಕನಾಥಸಾ ರಾಜೋಳ್ಳಿ ಹೇಳಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳಾಗುತ್ತಿದ್ದು ನಮ್ಮ ಕಾನೂನಿ ಬಗ್ಗೆ ದುಷ್ಕರ್ಮಿಗಳಿಗೆ ಯಾವುದೇ ಭಯವಿರದ ಕಾರಣ ದಿನೆದಿನ ಇಂತಹ ಪ್ರಕರಣಗಳು ಹೆಚ್ಚುತ್ತಿರುವದೇ ಇದಕ್ಕೆ ಬಹುಮುಖ್ಯ ಕಾರಣ ಎಂದರು ತಪ್ಪಾಗದು. ಹೀಗಾಗಿ ಇಂತಹ ಅಮಾನವೀಯ ಕೃತ್ಯ ಎಸಗುವವರಿಗೆ ಇದೇ ಎಚ್ಚರಿಕೆಯ ಗಂಟೆಯಾಗಬೇಕು. ತಪಿತಸ್ಥರನ್ನು ಕೂಡಲೇ ಬಂಧಿಸಿ ಮುಂದೆ ಯಾರು ಕೂಡಾ ಇಂತಹ ಕೃತ್ಯವೆಸಗಿರಬಾರದು ಅಂತಹ ಅತ್ಯಂತ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಈ ರೀತಿಯ ಘಟನೆಗಳು ಮರುಕಳಿಸೊದಿಲ್ಲ. ಒಂದು ವೇಳೆ ದುಷ್ಕರ್ಮಿಗಳನ್ನು ಬಂಧಿಸದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಮುಂದೆ ನಡೆಯುವ ಅನಾಹುತಕ್ಕೆ ನೇರವಾಗಿ ಸರ್ಕಾರವೇ ಕಾರಣವಾಗುತ್ತದೆ ಎಂದು ಸಮಾಜದ ಉಪಾಧ್ಯಕ್ಷ ನಾಗರಾಜ ಚವ್ಹಾಣ ಎಚ್ಚರಿಸಿದರು.
ಈ ಸಮಯದಲ್ಲಿ ತರುಣ ಸಂಘದ ಅಧ್ಯಕ್ಷ ಜಮುನಾದಾಸ ಕಾಟವಾ, ಎಸ್.ಎಸ್.ಕೆ. ಹಿತರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ನಾಗರಾಜ ನಗರಿ, ರವಿ ಬಸವಾ, ಶ್ರೀಕಾಂತಸಾ ಕಾಟವಾ, ಯಲ್ಲೂಸಾ ಬಸೂದೆ, ಪರಶುರಾಮ ರಾಜೋಳ್ಳಿ, ಪರಶುರಾಮ ರಾಯಬಾಗಿ ಮತ್ತಿತರಿದ್ದರು.
ಪ್ರತಿಭಟನೆಯ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ