ರೈತ ಹೋರಾಟಗಾರ್ತಿ ಜಯಶ್ರೀ ನಿಧನ ರೈತ ಸಂಘದಿಂದ ಸಂತಾಪ
ಬೆಳಗಾವಿ ಜಿಲ್ಲೆಯ ಪ್ರಮುಖ ರೈತ ಮಹಿಳೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಗುರವಣ್ಣವರ ನಿಧನಕ್ಕೆ ಇಳಕಲ್ ಹುನಗುಂದ ಅವಳಿ ತಾಲೂಕಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರೈತ ಸಂಘದ ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮಾತನಾಡಿ ಜಯಶ್ರೀ ಗುರವಣ್ಣವರ ಕಬ್ಬಿನ ಬೆಲೆ, ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಹೊಲಗಳಿಗೆ ರಸ್ತೆ, ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಕಾರ್ಮಿಕರ ಬದುಕು ಭವನೆಗಳ ಬಗೆಗೆ ಜಯಶ್ರೀ ತೀವ್ರ ಹೋರಾಟ ನಡೆಸಿ ಗಮನ ಸೆಳೆದಿದ್ದರು. ನಡುವಯಸ್ಸಿನಲ್ಲಿ ಜಯಶ್ರೀ ಅವರ ಸಾವು ರೈತ ಹೋರಾಟಕ್ಕೆ ಕುಂದು ತಂದಿದೆ ಎಂದು ನೋವನ್ನು ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಹುನಗುಂದ ಅಧ್ಯಕ್ಷ ಬಸವನಗೌಡ ಪೈಲ್, ರೂಸಲಸಾಬ ತಹಸೀಲ್ದಾರ, ಮಹಾಂಲಿಂಗಪ್ಪ ಅವಾರಿ, ಬಸವನಗೌಡ ಪಾಟೀಲ, ಮಲ್ಲನಗೌಡ ತುಂಬದ, ರಾಜಮಹಮ್ಮದ ನದಾಫ್, ಮೋಸೀನ್ ನದಾಫ್ ಸೇರಿದಂತೆ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.