anchor Aparna ನಿರೂಪಕಿ ಅಪರ್ಣಾ ನಿಧನಕ್ಕೆ ಸಂತಾಪ
ಇಳಕಲ್ : ಕನ್ನಡ ಭಾಷೆಯಲ್ಲಿ ಸುಲಲಿತವಾಗಿ ನಿರೂಪಣೆ ಮಾಡುತ್ತಾ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದ ಚಿತ್ರ ಮತ್ತು ಕಿರುತೆರೆ ನಟಿ ಅಪರ್ಣಾ ನಿಧನಕ್ಕೆ ಇಳಕಲ್ ನಗರದ ಹಲವಾರು ಸಂಘ ಸಂಸ್ಥೆಗಳು ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ.
ಶ್ರೀಮಠದ ಗುರುಮಹಾಂತಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ , ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಹಾದೇವ ಕಂಬಾಗಿ, ನಾಟಕ ಅಕಾಡೆಮಿಯ ಸದಸ್ಯ ಕೆ ಎ ಬನ್ನಟ್ಟಿ ,
ಲಲಿತಕಲಾ ಅಕಾಡೆಮಿ ಸದಸ್ಯರಾದ ವೆಂಕಟೇಶ ಬಡಿಗೇರ, ಚಂದ್ರಕಾAತ ಸರೋದೆ, ಸ್ನೇಹರಂಗ ಅಧ್ಯಕ್ಷ ಬಸವರಾಜ ಮಠದ, ಉಮೇಶ ಶೊರೀರ. ರಂಗ ಸಂಘಟಕ ಮಹಾಂತೇಶ ಗಜೇಂದ್ರಗಡ,
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿಶ್ವನಾಥ ವಂಶಾಕೃತಮಠ ಅಂಕಣಕಾರ ರಾಜಶೇಖರ ಕಲ್ಮಠ , ಮತ್ತಿತರರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.






