Cylinder blast damage ಸಿಲಿಂಡರ್ ಸ್ಪೋಟ ಹಾನಿ : ಕುಟುಂಬಸ್ಥರಿಗೆ ಲಿಮ್ರಾ ವೆಲಫೇರ್ ಅಸೋಸಿಯೇಶನ್ ಧನಸಹಾಯ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಎಸ್.ಆರ್.ಕೆ. ಬಡಾವಣೆಯಲ್ಲಿನ ನಿವಾಸಿ ರಾಜೇಸಾಬ ಭಾವಿಕಟ್ಟಿ ಅವರ
ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅಪಾರ ಹಾನಿಯಾಗಿ ಮನೆಯಲ್ಲಿನ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ.
ಈ ಸುದ್ದಿ ತಿಳಿದÀ ಲಿಮ್ರಾ ವೆಲ್ಫೇರ್ ಅಸೋಶಿಯೇಶನ್ ಅಧ್ಯಕ್ಷ ಅಬ್ದುಲರಜಾಕ ತಟಗಾರ, ಕಾರ್ಯಾದರ್ಶಿ
ಸುಲೇಮಾನ ಚೋಪದಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸ್ವಾಂತನ ಹೇಳಿ
ಕಿರಾಣಿ ಮತ್ತು ೫೦೦೦ ಸಾವಿರ ಧನ ಸಹಾಯವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಅಹ್ಮದಬಾಗವಾನ ಇದ್ದರು.