ಗಾಳಿ ಮಳೆಗೆ ಹಾನಿ : ಸ್ಥಳಕ್ಕೆ ವಿಪ ಸದಸ್ಯ ಪೂಜಾರ ಭೇಟಿ ಪರಿಶೀಲನೆ
ಬಾಗಲಕೋಟೆ ತಾಲೂಕಿನ ತುಳಸಿಗೇರಿ, ಚಿಕ್ಕ ಶೆಲ್ಲಿಕೇರಿ ಸೇರಿದಂತೆ ಹಲವೆಡೆಗಳಲ್ಲಿ ಗುರುವಾರ ಸಂಜೆ ಬೀಸಿದ ಗಾಳಿ, ಮಳೆಗೆ ಮನೆಯ ಮೇಲ್ಪಾವಣಿ, ಶೆಡ್ಡುಗಳು ಹಾರಿ ಅನೇಕ ಮರಗಳು ಧರೆಗೆ ಉರುಳಿವೆ. ಗಾಳಿ ಮಳೆಯಿಂದಾಗಿ ತುಳಸಿಗೇರಿಯ ಮಾರುತೇಶ್ವರ ದೇವಸ್ಥಾನದ ಮುಂಭಾಗದಲ್ಲಿದ್ದ ದೊಡ್ಡ ಮರಗಳು ನೆಲಕ್ಕುರುಳಿವೆ. ಹಾನಿಗೊಳಗಾದ ಪ್ರದೇಶಗಳಿಗೆ ಶುಕ್ರವಾರದಂದು ವಿಧಾನ ಪರಿಷತ್ ಸದಸ್ಯ ಪಿ. ಎಚ್. ಪೂಜಾರ ಭೇಟಿ ನೀಡಿ ಪರಿಶೀಲಿಸಿದರು.
ಅಲ್ಲಿಯ ಸಮಸ್ಯೆಗಳನ್ನು ರೈತರೊಂದಿಗೆ ಚರ್ಚೆ ನಡೆಸಿ, ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.