Dead body ಇಳಕಲ್‌ದಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಸ್ಮಾಟ್ ಪಾಯಿಂಟ್ ಮುಂಭಾಗದಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಬುಧವಾರ ಪತ್ತೆಯಾಗಿದೆ.
ಮೃತವ್ಯಕ್ತಿಯನ್ನು ನಗರದ ೧೦ ನೇ ಶಾಲೆಯ ಹತ್ತಿರದ ಅಶೋಕ ಸಂಗಪ್ಪ ಹಿಪ್ಪರಗಿ (೪೦) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಸಾವಿನ ಕಾರಣ ತಿಳಿದು ಬಂದಿಲ್ಲ ಪೋಲಿಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.
ವ್ಯಕ್ತಿಯ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ವರದಿ : ಭೀಮಣ್ಣ ಗಾಣಿಗೇರ