ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಬಂಧನ !
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರ ಬೆನ್ನು ಬಿದ್ದಿದ್ದ ಜಾರಿ ನಿರ್ದೇಶನಾಲಯ ಕೊನೆಗೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಗುರುವಾರ ಇಡೀ ದಿನ ರಾಷ್ಟ್ರ ರಾಜಧಾನಿಯಲ್ಲಿ ಹೈಡ್ರಾಮಾ ನಡೆದಿದ್ದು, ರಾತ್ರೋರಾತ್ರಿ ಇ.ಡಿ. ಅಧಿಕಾರಿಗಳು ಕೇಜ್ರವಾಲ್‌ರನ್ನು ಬಂಧಿಸಿ ತಮ್ಮ ಪ್ರಧಾನ ಕಚೇರಿಗೆ ಕರೆದೊಯ್ದಿದ್ದಾರೆ
ಇ.ಡಿ. ಲಾಕಪ್‌ನಲ್ಲೇ ರಾತ್ರಿ ಕಳೆದ ಅವರನ್ನು ಶುಕ್ರವಾರ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪ ಡಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭ ವಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ. ದೆಹಲಿ ಅಬಕಾರಿ ಹಗರಣದಲ್ಲಿ ಈಗಾಗಲೇ ದೆಹಲಿ ಡಿಸಿಎಂ ಸಿಸೋಡಿಯಾ, ಬಿಆರ್‌ಎಸ್ ನಾಯಕಿ ಕವಿತಾ ಸೇರಿದಂತೆ ಹಲವು ಬಂಧನಕ್ಕೊಳಗಾಗಿದ್ದು, ಕೇಜ್ರವಾರದ್ದು ಈ ಪ್ರಕರಣದಲ್ಲಿ ನಡೆದ ಅತಿದೊಡ್ಡ ಬಂಧನವಾಗಿದೆ. ಅಬಕಾರಿ ನೀತಿ ಪ್ರಕರಣ ಸಂಬಂಧ ವಿಚಾರಣೆಗೆ
ಯಾಕೆ ಬಂಧನ?
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಖ್ಯಮಂತ್ರಿ ಕೇಜಿವಾಲ್‌ಗೆ ಸತತ 9 ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ಬೇರೆ ಬೇರೆ ನೆಪ ಹೇಳಿ ಅವರು ವಿಚಾರಣೆಗೆ ಹಾಜರಾಗದೇ ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದರು. ಒಂದು ಹಂತದಲ್ಲಿ ಇದರಿಂದ ಕ್ರುದ್ದಗೊಂಡಿದ್ದ ಇ.ಡಿ. ಅಧಿಕಾರಿಗಳು ಕೇಜಿ ವಾಲ್ ವಿರುದ್ದದೆಹಲಿಯ ಕೋರ್ಟ್‌ಗೂ ದೂರು ಸಲ್ಲಿಸಿದ್ದರು. ಇದೇ ವೇಳೆ, 22(ಶುಕ್ರವಾರ)ರಂದು ಹಾಜರಾಗುವಂತೆ ಇತ್ತೀಚೆಗಷ್ಟೇ ಇ.ಡಿ. 9ನೇ ಸಮನ್ಸ್ ಜಾರಿ ಮಾಡಿತ್ತು. ಕೊನೆಗೆ ತಮ್ಮನ್ನು ಬಂಧಿಸದಂತೆ ಸೂಚಿಸಬೇಕು ಎಂದು ಕೋರಿ ಕೇಜ್ರವಾಲ್ ಅವರು ದೆಹಲಿ ಮೊರೆಹೋಗಿದ್ದರು. ಆದರೆ, ಈ ಹೈಕೋರ್ಟ್ ಮರುವಾರ ಹೈಕೋರ್ಟ್ ವಜಾ ಅರ್ಜಿಯನ್ನು ಕಾನೂನು ಹೋರಾಟದಲ್ಲಿ ಹಿನ್ನಡೆ ಆಗುತ್ತಲೇ ಕೇಜಿವಾಲ್ ರನ್ನು ಇ.ಡಿ. ಬಂಧಿಸಿತು.
ಏನಿದು ಪ್ರಕರಣ?
- ಅಬಕಾರಿ ವಲಯದ ಸುಧಾರಣೆಗಾಗಿ ಆಪ್ ಸರ್ಕಾರದಿಂದ 2021ರಲ್ಲಿ ದಿಲ್ಲಿ ఆబశారి నిత్ జారి
- ಈ ನೀತಿ ಅನ್ವಯ ಖಾಸಗಿ ಕಂಪನಿಗಳು ಮತ್ತು ಉದ್ಯಮಗಳಿಗೆ ಚಿಲ್ಲರೆ ಮದ್ಯ ಮಾರಾಟಕ್ಕೆ ಅವಕಾಶ
- ಸರ್ಕಾರವು ತನ್ನ ಪರವಿರುವ ಕಂಪನಿಗಳ ಮಾಲೀಕರಿಗೆ ಮತ್ತು ಲಂಚ ಪಡೆದು ಹೊಸಬ ರಿಗೆ ಪರವಾನಗಿ ನೀಡಿದೆ ಎಂಬ ಆರೋಪ
- ದೆಹಲಿಯ ಲೆಫ್ಟಿನೆಂಟ್ ಗವರ್ನ‌್ರರಿಂದ ಸಿಬಿಐ ತನಿಖೆಗೆ ಆದೇಶ
- 2022ರಲ್ಲಿ ಹೊಸ ಅಬಕಾರಿ ನೀತಿ ರದ್ದು ಮಾಡಿದ ಆಪ್ ಸರ್ಕಾರ
- ಈ ಹಗರಣದಿಂದ 2631 ಕೋಟಿ ರೂ. ನಷವಾಗಿದೆ ಎಂದ ಜಾರಿ ನಿರ್ದೇಶನಾಲಯ.