Bagalkot ಬಾಗಲಕೋಟೆಯಲ್ಲಿ ಕಲ್ಲು ತೂರಾಟ ಆರೋಪಿಗಳನ್ನು ಗಡಿಪಾರು ಮಾಡುವಂತೆ ಆಗ್ರಹ
ಇಳಕಲ್ಲ : ಬಾಗಲಕೋಟದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಭಾವ ಚಿತ್ರ ಮೆರವಣಿಗೆ ಸಮಯದಲ್ಲಿ
ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದು ಗಲಭೆ ಸೃಷ್ಟಿಸಿದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರನ್ನು
ಗಡಿಪಾರು ಮಾಡಿ ಕಠಿಣ ಕ್ರಮ ಜರುಗಿಸುವಂತೆ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತ ಇಳಕಲ್ ತಾಲೂಕ ಘಟಕದ
ಪದಾಧಿಕಾರಿಗಳು ಆಗ್ರಹಿಸಿದರು.
ಇಲ್ಲಿನ ಕರ್ನಾಟಕ ಕ್ಷತ್ರೀಯ ಮರಾಠ ಷರಿಷತ್ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ
ಕಚೇರಿಗೆ ಆಗಮಿಸಿ ತಹಸೀಲ್ದಾರ ಅಮರೇಶ ಪಮ್ಮಾರಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕರ್ನಾಟಕ ಕ್ಷತ್ರೀಯ ಮರಾಠ ಷರಿಷತ್ ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ ಕೋರೆನವರ ಮಾತನಾಡಿ ಶ್ರೀ
ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಸಮಯದಲ್ಲಿ ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದಿರುವ
ಖಂಡನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಮುಂದಿನ ದಿನಮಾನದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸಬಾರದು
ಎಂದರು. ಪ್ರತಿಭಟನೆಯಲ್ಲಿ ಗಣೇಶ್ ರಾವ್ ಮೋರೆ. ಅವಿನಾಶ್ ಕದಂ. ಪ್ರಕಾಶ್ ಜಾದವ್. ರಾಮು ಖಾಡೆ. ಪ್ರಹ್ಲಾದ ಆರೇರ.
ಮುತ್ತಣ್ಣ ಆರೇರ. ವಿನಾಯಕ ಕೇಶಣ್ಣವರ್. ಭರತ್ ಸಾಳಂಕಿ. ಮೌನೇಶ್ ಕೋರೆನವರ, ರಾಮು ಖಾಡೆ ಇದ್ದರು.






