Deputy Chief Minister gave bumper off to Congress party workers ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬಂಪರ್ ಆಫ್‌ರ ನೀಡಿದ ಉಪಮುಖ್ಯಮಂತ್ರಿ

WhatsApp Group Join Now
Telegram Group Join Now
Instagram Group Join Now
Spread the love

 

 Deputy Chief Minister gave bumper off to Congress party workers ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬಂಪರ್ ಆಫ್‌ರ ನೀಡಿದ ಉಪಮುಖ್ಯಮಂತ್ರಿ

 

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬಂಪರ್ ಆಫ್‌ರ ನೀಡಿದ ಉಪಮುಖ್ಯಮಂತ್ರಿ

 

ಬೆಂಗಳೂರು : ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿಮಾಡಿ ಅವರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಚಿವರು ತಿಂಗಳಲ್ಲಿ ಅರ್ಧ ದಿನವನ್ನು ಕಾರ್ಯಕರ್ತರ ಸಮಸ್ಯೆಗಳನ್ನು ಕೇಳಲು ನಾವು ಸಂಪೂರ್ಣವಾಗಿ ಮೀಸಲಿಡುತ್ತಿದ್ದಾರೆ.

ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಮ್ಮ ಫೇಸ್ ಬುಕ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

 

ಬೆಂಗಳೂರು

ಪಕ್ಷದ ಇಬ್ಬರು ಅಥವಾ ಮೂವರು ಪದಾಧಿಕಾರಿಗಳಿಗೆ ಈ ಜವಾಬ್ದಾರಿವಹಿಸಲಾಗುವುದು. ಪಕ್ಷದ ಕಾರ್ಯಕರ್ತರು ಒಂದು ವಾರ ಮುಂಚಿತವಾಗಿ ತಮ್ಮ ಸದಸ್ಯತ್ವ ಪ್ರಮಾಣಪತ್ರವನ್ನು ನೀಡಿ ಯಾವ ಸಚಿವರನ್ನು ಭೇಟಿಯಾಗಬೇಕೆಂದು ಲಿಖಿತ, ಅಥವಾ ಇಮೇಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಇದು ರಾಜ್ಯಮಟ್ಟದಿಂದ ಬ್ಲಾಕ್‌ಮಟ್ಟದವರೆಗಿನ ಕಾರ್ಯಕರ್ತರಿಗೆ ಮಾತ್ರ ನೀಡಿರುವ ಅವಕಾಶವಾಗಿದೆ. ಮಾಜಿ ಸಚಿವರಿಗೆ, ಶಾಸಕರಿಗೆ ಈ ಭೇಟಿಯ ಅವಕಾಶ ಇರುವುದಿಲ್ಲ. ಕಾರ್ಯಕರ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಅವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ.

ವರದಿ :ಭೀಮಣ್ಣ ಗಾಣಿಗೇರ (ಇಳಕಲ್ಲ)


Spread the love

Leave a Comment

error: Content is protected !!