ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರಹ ಬದಲಾವಣೆ ಇಲ್ಲದಿದ್ದರೂ ಉದ್ದಿಮೆದಾರರಿಗೆ ನಿರಾಶೆಯ ಬಜೆಟ್ : ಪ್ರಶಾಂತ ಹಂಚಾಟೆ
ಸರಕಾರದ ವಿವಿಧ ಯೋಜನೆಗಳಿಗೆ ಹಣ ಹೊಂದಿಸುವಾಗ ಜನರಿಗೆ ಹೊರೆಯಾಗದಂತೆ ಹಣ ಹೊಂದಿಸುವದು ಜಾಣತನ. ಆದರೆ ಹೊಸ ಸರಕಾರದ ಮೊದಲ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವರು ತೆರಿಗೆದಾತ ಬಂಧುಗಳಿಗೆ ಸಂಪನ್ಮೂಲ ಕ್ರೂಡಿಕರಣದಲ್ಲಿ ಸರಿಯಾದ ಮಾರ್ಗ ಅನುಸರಿಸಿಲ್ಲ, ವಿಶೇಷವಾದ ತೆರಿಗೆ ಪ್ರೋತ್ಸಾಹ ಯೋಜನೆಗಳಿಗೆ ಅವಕಾಶ ನೀಡದೆ ನಿರಾಶೆ ಮೂಡಿಸಿದ್ದಾರೆ.
ಆದಾಯ ತೆರಿಗೆಯಲ್ಲಿನ ಹೊಸ ತೆರಿಗೆ ನೀತಿಯನ್ನು ಈ ಬಜೆಟನಲ್ಲಿ ಗಣನೀಯವಾಗಿ ಬೆಂಬಲಿಸಿದ್ದು, ಸೆಕ್ಷನ್ ೮೦ ಅ ಉಳಿತಾಯ ಯೋಜನೆಗಳಿಗೆ ಹಿನ್ನಡೆಯಾಗಿ ಜನರಲ್ಲಿ ಉಳಿತಾಯ ಮಾಡುವ ಯೋಚನೆಗೆ ಧಕ್ಕೆಯಾಗುತ್ತದೆ.
ವೇತನದಾರರು ಹೊಸ ತೆರಿಗೆ ಪದ್ದತಿಯಲ್ಲಿ ರೂ. ೭೫೦೦೦.೦೦ ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆದು ಹೊಸ ತೆರಿಗೆ ಪದ್ದತಿಯಲ್ಲಿ ಕಡಿಮೆ ಟ್ಯಾಕ್ಸ್ ಯೋಜನೆಯ ಲಾಭ ಪಡೆಯಲು ಅವಕಾಶ ನೀಡಿದೆ.
ಶೇರು ಮಾರುಕಟ್ಟೆಯ ವ್ಯವಹಾರಕ್ಕೆ ಸಧ್ಯ ಇರುವ ೦.೧% ತೆರಿಗೆಯನ್ನು ೦.೨% ಕ್ಕೆ ಏರಿಸಿರುವದು ಸರಿಯಾದ ಕ್ರಮವಲ್ಲ, ಇದರಿಂದ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರಿಗೆ ನಿರಾಶೆಯಾಗಿದೆ, ಹೀಗಾಗಿ ಇವತ್ತಿನ ಶೇರು ಮಾರುಕಟ್ಟೆ Seಟಿsex ನಲ್ಲಿ ೧೨೬೬.೧೭ ಹಾಗೂ ನಿಫ್ಟಿ ೪೩೫.೦೫ ಅಂಕಗಳು ಕೆಳಕಂಡು ಹೂಡಿಕೆದಾರರು ಹಾನಿ ಅನುಭವಿಸುವಂತಾಯಿತು.
ಎಲ್ಲ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೋಷಣೆ, ದೇಶಿಯ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ವಿಧ್ಯಾರ್ಥಿಗಳಿಗೆ ರೂ. ೧೦ ಲಕ್ಷ ನೆರವು, ಮುದ್ರಾ ಯೊಜನೆಯಲ್ಲಿ ಸಾಲ ಸೌಲಭ್ಯ ಮಿತಿಯನ್ನು ರೂ. ೧೦ ಲಕ್ಷದಿಂದ ರೂ. ೨೦ ಲಕ್ಷಕ್ಕೇ ಏರಿಸಿದ್ದು, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆನ್ನು ಪ್ರಕಟಿಸಿದ್ದು ಹಾಗೂ ಮಹಿಳಾ ಉದ್ದಿಮೆಗಳಿಗೆ ಅವಶ್ಯಕ ಪ್ರೋತ್ಸಾಹ ಯೋಜನೆಗಳನ್ನು ವಿಸ್ತರಿಸಿ ಉದ್ಯೋಗ ಹೆಚ್ಚಳಕ್ಕೆ ಅನುಕೂಲ ಮಾಡಕೊಟ್ಟಿದೆ.
ಒಟ್ಟಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಸಂಪನ್ಮೂಲಗಳ ಕ್ರೂಡಿಕರಣದಲ್ಲಿ ಸಮರ್ಕಕ ಯೋಜನೆಗಳು ಇನ್ನಷ್ಟು ಪರಿಪಕ್ವವಾಗಿದ್ದರೆ ಒಂದು ಉತ್ತಮ ಬಜೆಟ್ ಆಗುತ್ತಿತ್ತು, ಈ ಬಜೆಟಗೆ ಪೂರ್ಣ ಅಂಕ ಕೊಡದಿದ್ದರು ೬೦% ಅಂಕ ಕೊಡಬಹುದು ಎಂದು ಚಾರ್ಟರ್ಡ್ ಟ್ಯಾಕ್ಸ್ ಪ್ರ‍್ಯಾಕ್ಟೀಶನರ್ ಪ್ರಶಾಂತ ಹಂಚಾಟೆ ತಿಳಿಸಿದ್ದಾರೆ.