Difficulty in women’s emancipation: Women holding a chembu sit-in ಮಹಿಳೆಯರ ಬಹಿರ್ದೆಸೆಗೆ ತೊಂದರೆ : ಚೆಂಬು ಹಿಡಿದು ಧರಣಿಗಿಳಿದ ಮಹಿಳೆಯರು

WhatsApp Group Join Now
Telegram Group Join Now
Instagram Group Join Now
Spread the love

 

Difficulty in women's emancipation: Women holding a chembu sit-in ಮಹಿಳೆಯರ ಬಹಿರ್ದೆಸೆಗೆ ತೊಂದರೆ : ಚೆಂಬು ಹಿಡಿದು ಧರಣಿಗಿಳಿದ ಮಹಿಳೆಯರು

 

ಮಹಿಳೆಯರ ಬಹಿರ್ದೆಸೆಗೆ ತೊಂದರೆ : ಚೆಂಬು ಹಿಡಿದು ಧರಣಿಗಿಳಿದ ಮಹಿಳೆಯರು

 

ಬಾಗಲಕೋಟ ಜಿಲ್ಲೆಯ ಇಳಕಲ್ಲದ ಗೌಳೇರಗುಡಿ ನವನಗರದದಲ್ಲಿ ಮೂಲಭೂತ ಸೌಕರ್ಯ ಮತ್ತು ಮಹಿಳೆಯರ ಬಹಿರ್ದೆಸೆಗೆ ತೊಂದರೆಯಾಗಿದ್ದು ಅದನ್ನು ಪರಿಹರಿಸಬೇಕು ಎಂದು ಅಲ್ಲಿನ ಮಹಿಳೆಯರು ಮಂಗಳವಾರದAದು ಕೈಯಲ್ಲಿ ಚೆಂಬು ಹಿಡಿದು ಪ್ರತಿಭಟನೆ ಮಾಡಿದರು.Difficulty in women's emancipation: Women holding a chembu sit-in ಮಹಿಳೆಯರ ಬಹಿರ್ದೆಸೆಗೆ ತೊಂದರೆ : ಚೆಂಬು ಹಿಡಿದು ಧರಣಿಗಿಳಿದ ಮಹಿಳೆಯರುನವನಗರದ ಪಕ್ಕದ ಬಯಲಿನಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಿದ್ದರು ಆದರೆ ಆ ಸ್ಥಳದ ಮಾಲಿಕರು ಅಲ್ಲಿ ಪ್ಲಾಟುಗಳನ್ನು ಮಾಡಿ ಸುತ್ತಲೂ ಒಳಗೆ ಹೋಗದಂತೆ ಬೇಲಿ ಹಾಕಿದ್ದರಿಂದ ಮಹಿಳೆಯರು ತೊಂದರೆಗೆ ಸಿಲುಕಿದರು.Difficulty in women's emancipation: Women holding a chembu sit-in ಮಹಿಳೆಯರ ಬಹಿರ್ದೆಸೆಗೆ ತೊಂದರೆ : ಚೆಂಬು ಹಿಡಿದು ಧರಣಿಗಿಳಿದ ಮಹಿಳೆಯರುಇದರಿಂದಾಗಿ ರೋಸಿ ಹೋದ ಮಹಿಳಾ ಮಣಿಗಳು ತಮ್ಮ ತಮ್ಮ ಕೈಯಲ್ಲಿ ಚೆಂಬು ಹಿಡಿದುಕೊಂಡು ಧರಣಿ ಕುಳಿತಿದ್ದರಿಂದ ನಗರಸಭೆಯ ಪೌರಾಯುಕ್ತರು ಸದಸ್ಯರಾದ ರೇಶ್ಮಾ ಮಾರನಬಸರಿ , ಸುರೇಶ್ ಜಂಗ್ಲಿ ಅಮೃತ ಬಿಜ್ಜಳ ಮೌಲಪ್ಪ ಬಂಡಿವಡ್ಡರ ಮತ್ತಿತರರು ಸೇರಿ ಸ್ಥಳಕ್ಕೆ ಧಾವಿಸಿ ಮಹಿಳೆಯರ ಜೊತೆಗೆ ಚರ್ಚೆ ಮಾಡಿ ಅವರನ್ನು ಸಮಾಧಾನಗೊಳಿಸಿದರು.

ಗೌಳೇರಗುಡಿ ಭಾಗದಲ್ಲಿ ಮಹಿಳೆಯರಿಗೆ ಸುಲಭ ಶೌಚಾಲಯ ಜೊತೆಗೆ ಒಳಚರಂಡಿ ವ್ಯವಸ್ಥೆ ಮಾಡಿ ಮನೆ ಮನೆಗಳಲ್ಲಿ ವೈಯುಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

 

ಈಗಾಗಲೇ ಕಾಮಗಾರಿ ಟೆಂಡರ್ ಆಗಿದ್ದು ಚುನಾವಣೆ ನೀತಿ ಸಂಹಿತೆಯಿAದಾಗಿ ಕೆಲಸ ಆರಂಭವಾಗಿಲ್ಲ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಿ ೪೫ ದಿನಗಳಲ್ಲಿ ಸುಲಭ ಶೌಚಾಲಯ ನಿರ್ಮಿಸಲಾಗುವದು ಎಂಬ ಭರವಸೆ ನೀಡಿದ ಮೇಲೆ ಮಹಿಳೆಯರು ಧರಣಿ ಅಂತ್ಯಗೊಳಿಸಿದರು. ಪಿಎಸ್‌ಐ ಸೋಮೇಶ ಗೆಜ್ಜಿ ನೇತೃತ್ವದಲ್ಲಿ ಪೋಲಿಸರು ಗೌಳೇರಗುಡಿ ಪ್ರದೇಶದಲ್ಲಿ ಬಂದೋಬಸ್ತ ವ್ಯವಸ್ಥೆ ಕೈಗೊಂಡಿದ್ದರು.

 


Spread the love

Leave a Comment

error: Content is protected !!