Minister K. S. Eshwarappa ಡಿಕೆ ಶಿವಕುಮಾರ್ ಪೆನ್ ಡ್ರೈವ್ ಪ್ಯಾಕ್ಟರಿ ಮಾಲೀಕ ಅಂತ ಹೇಳಲ್ಲ! : ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ
ಬಾಗಲಕೋಟೆ : ಡಿಕೆ ಶಿವಕುಮಾರ್ ಪೆನ್ ಡ್ರೈವ್ ಪ್ಯಾಕ್ಟರಿ ಮಾಲೀಕ ಅಂತ ಹೇಳಲ್ಲ. ಕುಮಾರಸ್ವಾಮಿ ಅವರ ದೊಡ್ಡ ಪಾತ್ರ ಇದೆ ಅಂತಾನೂ ಹೇಳಲ್ಲ. ಹೆಣ್ಣನ್ನುತಾಯಿ ಅಂತ ಕರೆಯುವ ನಾಡಿನಲ್ಲಿ ಹೆಣ್ಣಿಗೆ ಇಷ್ಟು ಅಪಮಾನ ಆಗಿದ್ದು ಇದು ಮೊದಲನೇ ಬಾರಿ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ, ಗೃಹಮಂತ್ರಿಗೆ ಕೈ ಮುಗಿದು ಪ್ರಾರ್ಥನೆ ಮಾಡ್ತಿನಿ. ಇದು ನಿಮ್ಮ ಕೈಲಿ ಆಗಲ್ಲ, ಕೊಟ್ಟಿಡಿ ಸಿಬಿಐಗೆ. ನಾವು ಮಾಡ್ತಿವಿ ನಮಗೆ ಶಕ್ತಿ ಇದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ದಾವಣಗೆರೆಯ ಚನ್ನಗಿರಿ ಲಾಕಪ್ ಡೆತ್ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೃತ ಆದಿಲ್ ಕುಟುಂಬಸ್ಥರು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ದೂಷಿಸಿ, ಮಾತನಾಡುತ್ತಿದೆ. ಈ ವಿಚಾರ ಕುರಿತು ಇಂದು ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ರಾಜ್ಯ ಸರ್ಕಾರ ವ್ಯವಸ್ಥೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬAತಿದೆ ಎಂದು ವ್ಯಂಗ್ಯವಾಡಿದ್ದಾರೆ.
ನೇಹಾ ಕೊಲೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ: ಸಿಎಂ, ಗೃಹ ಸಚಿವರು ಭಿನ್ನ ಹೇಳಿಕೆ ಕೊಡುತ್ತಾರೆ. ನೇಹಾ ಕೊಲೆ ವೈಯಕ್ತಿಕ ಅಂತ ಒಬ್ಬರು ಹೇಳಿದ್ರೆ, ಇದಕ್ಕೂ ಲವ್ ಜಿಹಾದ್‌ಗೂ ಸಂಬAಧ ಇಲ್ಲ ಅಂತ ಮತ್ತೊಬ್ಬರು ಹೇಳುತ್ತಾರೆ. ಏನೇ ತೀರ್ಮಾನಕ್ಕೆ ಬರಬೇಕಾದ್ರೂ ತನಿಖೆ ನಂತರ ಬರಬೇಕು ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಸತ್ಯ ಹರಿಶ್ಚಂದ್ರರು ತಾನೆ? ಪ್ರಕರಣ ಸಿಬಿಐಗೆ ಯಾಕೆ ಕೊಡ್ತಿಲ್ಲ? ಈ ರೀತಿ ಕೊಲೆ, ಸುಲಿಗೆ ಹಿಂದೆAದು ನೋಡಿರಲಿಲ್ಲ. ಈ ಎಲ್ಲಾ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಎಂದರು.
ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ : ಹಿಂದೂಳಿದವರು, ದಲಿತರು ಎಲ್ಲ ಸಮಾಜ ಸೇರಿಸಿ ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಾ ಹೇಳಿದ್ದಾರೆ. ಚುನಾವಣೆ ಮುಗಿದ ನಂತರ ನೋಡೋಣ ಎನ್ನುವ ಮೂಲಕ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸುಳಿವು ನೀಡಿದರು. ಬಾಗಲಕೋಟೆಯಲ್ಲಿ ಮಾತನಾಡಿ,
ರಾಜ್ಯದಲ್ಲಿ ಹಿಂದೂಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಜನ ಹೇಳ್ತಿದ್ದಾರೆ. ಈ ಕೇವಲ ರಾಜಕೀಯಕ್ಕೆ ಮಾತ್ರವಲ್ಲ, ಸಾಮಾಜಿಕ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು. ಅಂತಾ ಪ್ರಮುಖರ ಜೊತೆ ಮಾತಾಡಿ ತೀರ್ಮಾನ ಮಾಡುತ್ತೇನೆಂದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.